ಸ್ವತಂತ್ರವಾಗಿ ಸ್ಪರ್ಧಿಸಿದರೆ ಸುಮಲತಾ ಅಂಬರೀಶ್​ಗೆ ಕಾಂಗ್ರೆಸ್​​ ಬೆಂಬಲ‌ ಇಲ್ಲ ..!?

ಬೆಂಗಳೂರು: ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಬಗ್ಗೆ ಜೆಡಿಎಸ್​ ಜೊತೆಗೆ ಯಾವುದೇ ತಕರಾರು ತೆಗೆಯದಿರಲು ಕಾಂಗ್ರೆಸ್​ ತೀರ್ಮಾನಿಸಿದೆ. ಇಂದು ಕಾಂಗ್ರೆಸ್​ ಕಚೇರಿಯಲ್ಲಿ ನಡೆದ ಸರಣಿ‌ ಸಭೆ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡರು ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈಗಾಗಲೇ ಈ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ. ಎರಡು ಕ್ಷೇತ್ರಗಳಲ್ಲೂ ಜೆಡಿಎಸ್‌ ಜೊತೆ ಹೊಂದಾಣಿಕೆಗೆ ಸ್ಥಳೀಯ ಮಟ್ಟದಲ್ಲಿ ವಿರೋಧವಿದೆ. ಎರಡು ಕ್ಷೇತ್ರಗಳ ‌ಪೈಕಿ ಒಂದು ಕ್ಷೇತ್ರದಲ್ಲಾದ್ರೂ ಪಕ್ಷದ ಅಭ್ಯರ್ಥಿಯನ್ನ ಕಣಕ್ಕೆ‌ ಇಳಿಸುವಂತೆ ಕಾರ್ಯಕರ್ತರು ಒತ್ತಾಯಿಸ್ತಿದ್ದಾರೆ. ಅದರಲ್ಲೂ ಮಂಡ್ಯ ಕ್ಷೇತ್ರದಲ್ಲಿ ದಿವಂಗತ ಅಂಬರೀಶ್ ಪತ್ನಿ ಸುಮಲತಾರನ್ನ ನಿಲ್ಲಿಸುವಂತೆ ತೀವ್ರ ಒತ್ತಡವಿದೆ. ಆದರೆ, ಇಲ್ಲಿ‌ ಅನಗತ್ಯವಾಗಿ ಗೊಂದಲಕ್ಕೆ ಕಾರಣವಾಗುತ್ತಿದೆ. ಇನ್ನೂ ಕೂಡಾ ಜೆಡಿಎಸ್‌ ವರಿಷ್ಠರ ಜೊತೆ ಸೀಟು ಹಂಚಿಕೆ ಬಗ್ಗೆ ಮಾತುಕತೆಯನ್ನೇ ನಡೆಸಿಲ್ಲ. ಆಗಲೇ ಸ್ಥಳೀಯ ಮುಖಂಡರು ಸುಮಲತಾರನ್ನ ಕಣಕ್ಕಿಳಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಜೆಡಿಎಸ್​ ಸಹಜವಾಗಿಯೇ ಈ ಕ್ಷೇತ್ರ ತಮಗೆ ಬೇಕೆಂದು ಕೇಳಲಿದೆ. ಒಂದುವೇಳೆ ಜೆಡಿಎಸ್​ಗೆ ಈ ಕ್ಷೇತ್ರವನ್ನ ಬಿಟ್ಟುಕೊಡದಿದ್ದಲ್ಲಿ ಸುಮಲತಾ ಪಕ್ಷೇತರರಾಗಿ ನಿಲ್ಲುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿ ಬಂದಲ್ಲಿ ಸುಮಲತಾ ಅವರನ್ನು ಪರಿಷತ್ ಸದಸ್ಯರನ್ನಾಗಿ ಮಾಡುವ ಭರವಸೆ ನೀಡೋಣ. ಅದಕ್ಕೂ ಮೀರಿ‌ ಸ್ವತಂತ್ರವಾಗಿ ಸ್ಪರ್ಧಿಸಿದರೆ ಪಕ್ಷದಿಂದ ‌ಬೆಂಬಲ‌ ನೀಡುವುದು ಬೇಡವೆಂದು ಸಭೆಯಲ್ಲಿ ಚರ್ಚಿಸಿದ್ದಾರಂತೆ ಕೈ ಮುಖಂಡರು.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv