ಸಮಗ್ರ ತನಿಖೆಗೆ ಕೆಪಿಸಿಸಿ ಕಾರ್ಯದರ್ಶಿ ಆಗ್ರಹ

ಅಧಿಕಾರದ ಆಸೆಯಿಂದ ಆಪರೇಶನ್ ಕಮಲ‌ಪ್ರಾರಂಭ ಮಾಡಿದ್ದಾರೆ. ನೂರಾರು ಕೋಟಿ ಹಣದಿಂದ ಶಾಸಕರನ್ನು ಖರೀದಿ ಮಾಡ್ತಿದಾರೆ. ಬಿಜೆಪಿ ಮತ್ತು ಯಡಿಯೂರಪ್ಪ ಪಶುಪಕ್ಷಿಗಳಂತೆ ಶಾಸಕರನ್ನು ಖರಿದಿ ಮಾಡುವ ಚಾಳಿ ಶರು ಮಾಡಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಡಿ ಬಸವರಾಜ್ ಗುಡುಗಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಆಪರೇಷನ್ ಕಮಲದಂತಹ ಕೆಟ್ಟ ಸಂಸ್ಕೃತಿ ಬಿಜೆಪಿ ಮತ್ತು ಯಡಿಯೂರಪ್ಪ ನವರು ತಂದಿದ್ದಾರೆ. ಶಾಸಕರನ್ನು ಖರೀದಿ ಮಾಡುವುದು ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ವಿರೋಧಿ. ಇವರಿಂದ ಪ್ರಜಾಪ್ರಭುತ್ವ ತಲೆ ತಗ್ಗಿಸುವಂತಹ ಕೆಲಸ ನಡೆಯುತ್ತಿದೆ. ಬಿಜೆಪಿಯವರು ಪ್ರಜಾಪ್ರಭುತ್ವ ಕ್ಕೆ ಕಿಂಚಿತ್ತು ಗೌರವ ಕೊಡುತ್ತಿಲ್ಲ. ಈ ಆಪರೇಷನ್ ಕಮಲದ ಹಿಂದೆ ಪ್ರಧಾನಿ ಮೋದಿ ಇದ್ದಾರೆ. ಆಪರೇಷನ್ ಕಮಲಕ್ಕೆ ನರೇಂದ್ರ ಮೋದಿ, ಅಮಿತ್ ಶಾ ಫೈನಾನ್ಸ್ ಮಾಡುತ್ತಿದ್ದಾರೆ. ಅಮಿತ್ ಶಾ ಅವರು ಬೇರೆ ಬೇರೆ ರಾಜ್ಯಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಪಕ್ಷಾಂತರ ಮಾಡಿಸುತ್ತಿದ್ದಾರೆ. ಕೆಲ ರಾಜ್ಯಗಳಲ್ಲಿ ಬಿಜೆಪಿ ಅತಿ ಕಡಿಮೆ ಸ್ಥಾನ ಹೊಂದಿದ್ರೂ ಆಪರೇಷನ್ ಕಮಲದಿಂದ ಅಧಿಕಾರದಲ್ಲಿದ್ದಾರೆ. ಮೋದಿ ಅಮಿತ್ ಶಾ ಅವರು ರಾಜ್ಯದ ಸಮ್ಮಿಶ್ರ ಸರಕಾರವನ್ನು ಬುಡಮೇಲು ಮಾಡುವ ರೂವಾರಿಗಳು. ಮೋದಿ ಅಮಿತ್ ಶಾ ಅವರಿಂದ ಯಡಿಯೂರಪ್ಪ ಆಪರೇಷನ್ ಕಮಲದ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಪ್ರಧಾನಿ ಮೋದಿ ಅಮಿತ್ ಶಾ ಯಡಿಯೂರಪ್ಪ ನವರ ಮೇಲೆ ಸಮಗ್ರ ತನಿಖೆಯಾಗಬೇಕು ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಆದಾಯ ತೆರಿಗೆ ಅಧಿಕಾರಿಗಳು, ಕೇಂದ್ರೀಯ ತನಿಖಾ ಸಂಸ್ಥೆ, ಸಿಬಿಐ, ಎಸಿಬಿ ತನಿಖೆ ಮಾಡಬೇಕು
ಇನ್ನು ಇದೇ ವೇಳೆಯಲ್ಲಿ ಆಪರೇಷನ್ ಕಮಲದ ಕುರಿತು ಯಡಿಯೂರಪ್ಪನವರ ಆಡಿಯೋ ಬಿಡುಗಡೆ ಮಾಡಿರುವ ಹಿನ್ನೆಲೆ ಮಾತನಾಡಿದ ಬಸವರಾಜ್, ಯಡಿಯೂರಪ್ಪ ಇದು ನನ್ನ ಧ್ವನಿ ಅಲ್ಲ ಎಂದು ನಿರಾಕರಿಸಿದ್ರು. ಇದು ನನ್ನ ಧ್ವನಿ ಆದ್ರೆ ವಿರೋಧ ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಹಾಗೂ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ರು. ಆಡಿಯೋದಲ್ಲಿ ಸುಪ್ರೀಂ ಕೋರ್ಟ್ ಜಡ್ಜ್​​​ ಗಳನ್ನ ಬುಕ್ ಮಾಡಿದ್ದೀವಿ ಎಂದು ನ್ಯಾಯಮೂರ್ತಿಗಳನ್ನು ಎಳೆದು ತಂದಿದ್ದಾರೆ. ಇದರಿಂದ ಇಡೀ ನ್ಯಾಯಾಂಗ ವ್ಯವಸ್ಥೆ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಸ್ಪೀಕರ್ ಕೂಡ ಬುಕ್ ಮಾಡಿದ್ದೀವಿ ಎಂದು ಹೇಳುವುದರ ಮೂಲಕ ಸ್ಪೀಕರ್ ಗೌರವ ಘನತೆ ಹಾಳು ಮಾಡಿದ್ದಾರೆ. ಸತ್ತರೂ ಇಷ್ಟೊಂದು ದುಃಖ ಆಗುತ್ತಿರಲಿಲ್ಲ. ನನ್ನ ಸಾವಿಗಿಂತಲೂ ಈ ಆರೋಪ ಭೀಕರವಾಗಿದೆ ಎಂದು ಸ್ಪಿಕರ್ ಬಹಳ ನೊಂದಿದ್ದಾರೆ. ಶಾಸಕರ ಖರೀದಿಗೆ ನೂರಾರು ಕೋಟಿ ಕೊಡ್ತಿದಾರೆ. ಕೇವಲ 25ಲಕ್ಷ, 50ಲಕ್ಷ ವ್ಯವಹಾರ ಆದ್ರೆ ರೇಡ್ ಮಾಡಲು ಐಟಿ ಯವರು ಬರ್ತಾರೆ. ಈಗ ಆಪರೇಷನ್ ಕಮಲ ಮಾಡುತ್ತಿರುವ ಬಿಜೆಪಿಯವರ ಮೇಲೆ ಸುಮೊಟೋ(ಸ್ವಯಂ ಪ್ರೇರಿತ) ಕೇಸ್ ದಾಖಲಿಸಿಕೊಳ್ಳಬೇಕು. ಆಪರೇಷನ್ ಕಮಲದಲ್ಲಿ ಹರಿಯುತ್ತಿರುವ ಹಣದ ಹೊಳೆಯ ಬಗ್ಗೆ ಐಟಿ, ಆದಾಯ ತೆರಿಗೆ ಅಧಿಕಾರಿಗಳು, ಕೇಂದ್ರೀಯ ತನಿಖಾ ಸಂಸ್ಥೆ, ಸಿಬಿಐ, ಎಸಿಬಿ ತನಿಖೆ ಮಾಡಬೇಕು. ಪ್ರಧಾನಿ ಮೋದಿ ಕೇವಲ ಕಾಂಗ್ರೆಸ್ ಶಾಸಕರ ಮೇಲೆ ಮಾತ್ರ ಐಟಿ ರೇಡ್ ಮಾಡಿಸುತ್ತಿದ್ದಾರೆ. ಐಟಿ ಮತ್ತಿ ಇಡಿ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಿನ್ನೆಯ ಸರ್ಕಾರಿ ಕಾರ್ಯಕ್ರಮದಲ್ಲಿ ಸಿಎಂ ಅವರನ್ನು ಕೂಡ ಅಹ್ವಾನಿಸಬೆಕಿತ್ತು ಆದ್ರೆ ಅವರಿಗೆ ಆಮಂತ್ರಣ ಪತ್ರವೇ ನೀಡಿರಲಿಲ್ಲ. ಇಂತಹ ಹಿಟ್ಲರ್ ಆಡಳಿತದ ಪ್ರಧಾನಿ ಇದುವರೆಗೂ ಯಾರೂ ಬಂದಿಲ್ಲ ಎಂದು ಗುಡುಗಿದ್ದಾರೆ.