ಐಟಿಯವರಿಗೆ ಮಾನ ಮರ್ಯಾದೆ ಇಲ್ಲದಂತಾಗಿದೆ: ದಿನೇಶ್​ ಗುಂಡೂರಾವ್​ ವಾಗ್ದಾಳಿ

ಬೆಂಗಳೂರು: ಏಪ್ರಿಲ್ 9ರಂದು ಚಿತ್ರದುರ್ಗದ ಮೋದಿ ಸಮಾವೇಶದಲ್ಲಿ ಬಾಕ್ಸ್ ಸಾಗಿಸಿದ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಐಟಿ ವಿರುದ್ಧ ಕಿಡಿಕಾರಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಹೆಲಿಕಾಪ್ಟರ್​ನಲ್ಲಿ ಬಾಕ್ಸ್ ಹೇಗೆ ಬಂತು. ಆ ಬಾಕ್ಸ್ ಏನು, ಯಾರದ್ದು ಅನ್ನೋದನ್ನ ಸ್ಪಷ್ಟವಾಗಿ ಹೇಳಲಿ. ಮೋದಿ ಎಲ್ಲಾ ಕಡೆ ಯಾಕೆ ಬಾಕ್ಸ್ ಕೊಂಡೊಯ್ತಾರೆ. ತಾಕತ್ತಿದ್ದರೆ ಐಟಿಯವರು ಈ ಕಡೆ ಗಮನಹರಿಸಲಿ. ಐಟಿಯವರಿಗೆ ಮಾನ ಮರ್ಯಾದೆ ಇಲ್ಲದಂತಾಗಿದೆ. ಆ ಬಾಕ್ಸ್​ನಲ್ಲಿ ಏನಿದೆ ಎಂಬ ಅನುಮಾನವಿದೆ. ಪ್ರಧಾನಿಯವರೇ ಇದರ ಬಗ್ಗೆ ಸ್ಪಷ್ಟನೆ ನೀಡಲಿ. ಆ ಬಾಕ್ಸ್, ಖಾಸಗಿ ಕಾರಿನ ಬಗ್ಗೆಯೂ ತನಿಖೆ ನಡೆಯಲಿ. ಯಡಿಯೂರಪ್ಪ ಇದರ ಬಗ್ಗೆ ಮೊದಲು ಹೇಳಲಿ ಅಂತಾ ಕಿಡಿಕಾರಿದ್ರು.

ನಾಗಮಂಗಲ ಜಂಟಿ ಸಮಾವೇಶಕ್ಕೆ ಚೆಲುವರಾಯಸ್ವಾಮಿ ಗೈರಾದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಇದನ್ನ ಪಕ್ಷ ತುಂಬಾ ಗಂಭೀರವಾಗಿ ಪರಿಗಣಿಸಿದೆ. ಈಗಾಗಲೇ ಮಂಡ್ಯ ವಿಚಾರದಲ್ಲಿ ಚರ್ಚೆ ನಡೆಸಿದ್ದೇವೆ. ರಾಹುಲ್ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಯಾವಾಗ ಎಲ್ಲಿ ಕ್ರಮ ತೆಗೆದುಕೊಳ್ಳಬೇಕು ಅದನ್ನ ನೋಡ್ತೇವೆ. ಕುಮಾರಸ್ವಾಮಿಯವರ ಜೊತೆಯೂ ಈ ವಿಚಾರ ಚರ್ಚಿಸಿದ್ದೇವೆ. ಏನು ಕ್ರಮ ತೆಗೆದುಕೊಳ್ಳಬೇಕೋ ಅದನ್ನ ನಿರ್ಧರಿಸುತ್ತೇವೆ ಎಂದರು.

ಇದನ್ನೂ ಓದಿ: ಮೋದಿ ಹೆಲಿಕಾಪ್ಟರ್​​ನಿಂದ ಸೀಕ್ರೆಟ್​​ ಬಾಕ್ಸ್​ ಸಾಗಣೆ: ಕಪ್ಪುಪೆಟ್ಟಿಗೆ ಬಗ್ಗೆ ಕಾಂಗ್ರೆಸ್​​ ಅನುಮಾನ


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv