ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ಗೆ ರಾಹುಲ್‌ ಬುಲಾವ್‌..

ಬೆಂಗಳೂರು: ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಾಗಿ ಕಾಂಗ್ರೆಸ್​ನ ಕೆಲ ನಾಯಕರು ರಾಹುಲ್​ ಗಾಂಧಿಯವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದ ಬೆನ್ನಲ್ಲೇ ಇದೀಗ ದಿನೇಶ್‌ ಗುಂಡೂರಾವ್‌ ದೆಹಲಿಗೆ ಪ್ರಯಾಣಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದು ದಿನೇಶ್‌ ಅವರ ಮೊದಲ ಭೇಟಿಯಾಗಿದೆ. ಜುಲೈ 11 ರಂದು ಪದಗ್ರಹಣ ಮಾಡಲಿರುವ ದಿನೇಶ್ ಗುಂಡೂರಾವ್ ಇವತ್ತು ರಾಹುಲ್​ ಗಾಂಧಿರನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಲಿದ್ದಾರೆ.