‘ಆಡಿಯೋ ವಿರುದ್ಧ ಇಂದು ಸಂಜೆ ಕೆಪಿಸಿಸಿಯಿಂದ ಪ್ರಕರಣ ದಾಖಲು’

ದಾವಣಗೆರೆ: ಬಿಜೆಪಿಯ ಆಪರೇಷನ್ ಕಮಲಕ್ಕೆ ಸಂಬಂಧಿಸಿದಂತೆ ಫೋನ್ ರೆಕಾರ್ಡ್​ ಆಡಿಯೋ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚಿಗೆ ನಿಧನರಾದ ಮಾಜಿ ಶಾಸಕ ದಿ. ಎಂ.ಪಿ. ರವೀಂದ್ರ ಅವರಿಗೆ ಇಂದು ನುಡಿ-ನಮನ ಕಾರ್ಯಕ್ರಮವು ಜಿಲ್ಲೆಯ ಹರಪನಹಳ್ಳಿಯ ಎಡಿಬಿ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಡಿಯೋ ಬಗ್ಗೆ ಕೆಪಿಸಿಸಿ ವತಿಯಿಂದ ಇಂದು ಸಂಜೆ ಪ್ರಕರಣ ದಾಖಲಿಸುತ್ತೇವೆ. ಆಡಿಯೋ ಟೇಪ್ ಯಾರದ್ದು ಯಾರು ಯಾರು ಇದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ನಮ್ಮ ಶಾಸಕರು ಯಾರು ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿಲ್ಲ. ಇಂದು ಸಂಜೆ ಬೆಂಗಳೂರಿನಲ್ಲಿ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv