ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲ್ಲೆಯನ್ನ ಮೋದಿ, ಅಮೀತ್​​​ ಶಾ ಮಾಡಿದ್ದಾರೆ: ದಿನೇಶ್​​ ಗುಂಡೂರಾವ್

ಬೆಳಗಾವಿ: ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲ್ಲೆಯನ್ನು ಮೋದಿ, ಅಮೀತ್​​​ ಶಾ ಮಾಡಿದ್ದಾರೆ. ಐಟಿ ದುರ್ಬಳಕೆ ಮಾಡಿಕೊಂಡು ಬೆದರಿಸುವ ಯತ್ನ ನಡೆದಿದೆ. ಚುನಾವಣೆ ಆಯೋಗ ಸಹ ಏನು ಕ್ರಮ ಕೈಗೊಳ್ಳುತ್ತುಲ್ಲ. ಚುನಾವಣಾ ಆಯೋಗ ಸರ್ಕಾರದ ಕೈಗೊಂಬೆಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್​​ ಗುಂಡೂರಾವ್ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ದಿನೇಶ್​​ ಗುಂಡೂರಾವ್, ಸೋಲುವ ಭೀತಿಯಿಂದ ಬಿಜೆಪಿ ಐಟಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಎಂದು ಇಂದು ಸಭೆ ಮಾಡಲಾಗುತ್ತಿದೆ. ಬಿಜೆಪಿಯವರು ಸತ್ಯ ಹರಿಶ್ಚಂದ್ರರಾ? ಇದು ಫೇರ್ ಅಂಡ್ ಫ್ರೀ ಚುನಾವಣೆ ಅಲ್ಲವೇ ಅಲ್ಲ ಎಂದು ಹಳಿದ್ದಾರೆ.

ಸಿಎಂ ಎಚ್ ಡಿ ಕುಮಾರಸ್ವಾಮಿ ಮಾಧ್ಯಮಗಳ ಬಗ್ಗೆ ಹೇಳಿಕೆ ವಿಚಾರವಾಗಿ ಮಾತನಾಡಿದ ದಿನೇಶ್​​ ಗುಂಡೂರಾವ್, ಕೆಲವು ಟಿವಿ, ಪತ್ರಿಕೆ ಒನ್ ಸೈಯಡ್ ಆಗಿದ್ದಾರೆ. ರಕ್ಷಣೆ ನೀಡೋ ಜವಾಬ್ದಾರಿ ಸರ್ಕಾರದ್ದು. ಯಾವುದೇ ಮಾದ್ಯಮ ಮೇಲೆ ಹಲ್ಲೆ ಕ್ರಮ ಕೈಗೊಳ್ಳಬೇಕು. ಸಿಎಂ ಹೇಳಿಕೆಯನ್ನು ಬಿಜೆಪಿ ದುರುಪಯೋಗ ಪಡಿಸಿಕೊಳ್ಳಿವ ಸಾಧ್ಯತೆ ಇದೆ. ಬಿಜೆಪಿ ಅವರು ಏನ್ ಬೇಕಾದ್ರು ಮಾಡಲು ಸಿದ್ದರಿದ್ದಾರೆ ಎಂದು ಹೇಳಿದ್ದಾರೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv