ಮೋದಿ ಪಾಕಿಸ್ತಾನದ ಪರ ಇದ್ದಾರೆ: ದಿನೇಶ್ ಗುಂಡೂರಾವ್

ಚಿತ್ರದುರ್ಗ: ದೇಶದಲ್ಲಿ ಬದಲಾವಣೆ ಅಗತ್ಯ ಇದೆ. ನರೇಂದ್ರ ಮೋದಿಯವರ 5 ವರ್ಷದ ಸಾಧನೆ ಬಗ್ಗೆ ಮಾತಾಡಲ್ಲ. ಕಪ್ಪು ಹಣ, ಬ್ಯಾಂಕ್ ಖಾತೆಗೆ ಹಣ ಜಮಾವಣೆ ವಿಚಾರ ಎಲ್ಲೂ ಪ್ರಸ್ತಾಪ ಆಗುತ್ತಿಲ್ಲ. ಕೇವಲ ಸುಳ್ಳು ಮಾತುಗಳನ್ನ ಮೋದಿ ಹೇಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ನಗರದಲ್ಲಿ ನಡೆದ ಪರಿವರ್ತನಾ ಸಮಾವೇಶದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಇಂತಹ ಸುಳ್ಳುಗಾರ ದೇಶದ ಪ್ರಧಾನಿ ಆಗಿದ್ದು ದೇಶದ ದುರಂತ. ಬಡವರಿಗಾಗಿ ರಾಹುಲ್ ಗಾಂಧಿ ಉತ್ತಮ ಪ್ರಣಾಳಿಕೆ ತಂದಿದ್ದಾರೆ. ರಾಹುಲ್ ಗಾಂಧಿ, ಮೋದಿ ತರಹ ಸುಳ್ಳು ಹೇಳುವುದಿಲ್ಲ. ಜನರನ್ನ ಕೆರಳಿಸಿ, ಕೇವಲ ಪಾಕಿಸ್ತಾನದ ಬಗ್ಗೆ ಮಾತನಾಡುತ್ತಾರೆ. ಪಾಕಿಸ್ತಾನದ ಪರ ಮೋದಿ ಇದ್ದಾರೆ. ಅಕಡೆ ಪಾಕ್, ಮೋದಿ ಮತ್ತೆ ಪ್ರಧಾನಿ ಆಗಲಿ ಅಂತಾರೆ. ಹೀಗಾಗಿ ಪಾಕಿಸ್ತಾನ ಪರ ಮೋದಿ ಇದ್ದಾರೆ. ಈ ಬಾರಿಯ ಗಾಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಪರ ಇದೆ. ರಾಜ್ಯದಲ್ಲಿ 22 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಮೋದಿ ಸರ್ಕಾರ ಕಿತ್ತೆಸೆಯ ಬೇಕು ಎಂದು ಹೇಳಿದರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv