ಸುಮಲತಾ ಗೆಲುವು ಸರ್ಕಾರಕ್ಕೆ ಕಪಾಳಮೋಕ್ಷ ಮಾಡಿದಂತೆ: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಸುಮಲತಾ ಅಂಬರೀಶ್ ಗೆಲುವು ಸಾಮಾನ್ಯದ್ದಲ್ಲ. ಅವರ ಗೆಲುವು ಮೈತ್ರಿ ಸರಕಾರಕ್ಕೆ ಕಪಾಳಮೋಕ್ಷ ಮಾಡಿದಂತೆ ಅಂತಾ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಸುಮಲತಾಗೆ  ಬೆಂಬಲ ನೀಡಿತ್ತು. ಈಗ ಅವರಾಗಿಯೇ ಎನ್​ಡಿಎಗೆ ಬೆಂಬಲ ನೀಡಿದ್ರೆ ಎಲ್ಲರಿಗೂ ಒಂದು ಗೌರವ ಬರುತ್ತೆ. ಇಡೀ ಸರಕಾರವನ್ನ ಎದುರಿಸಿ ಸುಮಲತಾ ಗೆದ್ದಿದ್ದಾರೆ. ಮಂಡ್ಯ ಸ್ವಾಭಿಮಾನದ ಜಿಲ್ಲೆ ಅಂತ ಸಾಬೀತಾಗಿದೆ. ಸುಮಲತಾಗೆ ಬೆಂಬಲ ಕೊಡುವಾಗ ಬಿಜೆಪಿ ಯಾವುದೇ ಷರತ್ತು ಹಾಕಿಲ್ಲ. ನಾವು ಯಾವ ಕರಾರೂ ಮಾಡಿಕೊಂಡಿಲ್ಲ. ಈಗಲೂ ಈ ನಿಲುವಿಗೆ ಬಿಜೆಪಿ ಬದ್ಧವಾಗಿದೆ. ಅವರಾಗಿಯೇ ಎನ್​​ಡಿಎಗೆ ಬೆಂಬಲ ಕೊಟ್ಟರೆ ಸ್ವಾಗತ. ಇದರಿಂದ ಅವರಿಗೂ ನಮಗೂ ಗೌರವ ಬರುತ್ತದೆ. ಈ ಸರ್ಕಾರವನ್ನ ಯಾರೂ ಬೀಳಿಸಬೇಕಾಗಿಲ್ಲ. ಮೈತ್ರಿ ಸರ್ಕಾರ ತಾನಾಗಿಯೇ ಬೀಳುತ್ತದೆ. ಕುಮಾರಸ್ವಾಮಿ, ಸಿದ್ದರಾಮಯ್ಯ ಪ್ರಮಾದದ ಮಾತಾಡುತ್ತಾರೆ. ಇವರ ಹೊಂದಾಣಿಕೆಯು ಅಧಿಕಾರ ದಾಹಕ್ಕಾಗಿ, ಕುರ್ಚಿಗಾಗಿ ಎಂಬುದು ಸಾಬೀತಾಗಿದೆ. ಜನರೇ ಇವರನ್ನು ಮನೆಗೆ ಕಳುಹಿಸಿದ್ದಾರೆ. ಘಟಾನುಘಟಿಗಳು ಸೋಲಲು ಇದೇ ಕಾರಣ ಅಂತಾ ಕಿಡಿಕಾರಿದ್ದಾರೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv