ಡಬ್ಬಲ್ ಮರ್ಡರ್​ ಆರೋಪಿಗಳ ಜೊತೆ ನಂಟು, ಇಬ್ಬರು ಪೇದೆಗಳ ಆರೆಸ್ಟ್​

ಉಡುಪಿ: ಕೊಲೆ ಆರೋಪಿಗಳಿಗೆ ಸಹಕರಿಸಿದ ಆರೋಪದಲ್ಲಿ, ಜಿಲ್ಲಾ ಪಂಚಾಯ್ತಿ ಸದಸ್ಯ ಸೇರಿದಂತೆ ಡಿಎಆರ್​ನ ಇಬ್ಬರು ಪೊಲೀಸ್​ ಪೇದೆಗಳನ್ನ ಬಂಧಿಸಲಾಗಿದೆ. ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್, ಪೇದೆಗಳಾದ ಪವನ್ ಅಮೀನ್, ವೀರೇಂದ್ರ ಆಚಾರ್ಯ ಬಂಧಿತರು.

ಕಳೆದ ತಿಂಗಳ ಜನವರಿ  27 ರಂದು ಕೋಟದಲ್ಲಿ ಭರತ್ ಹಾಗೂ ಯತೀಶ್  ಎಂಬುವವರನ್ನ  ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಆರೋಪಿಗಳ ಜೊತೆ  ಪೇದೆಗಳು ನಿಕಟ ಸಂಪರ್ಕ ಹೊಂದಿದ್ದರು ಹಾಗೂ ಹೆಬ್ರಿಯ ಕುಚ್ಚೂರಿನಲ್ಲಿರುವ ಪವನ್ ಅಮೀನ್ ಮನೆಯಲ್ಲೇ  ಆರೋಪಿಗಳು ತಂಗಿದ್ದರು. ಇನ್ನು ಆರೋಪಿಗಳಿಗೆ ಮೊಬೈಲ್ ಹಾಗೂ ಹೊಸ ಸಿಮ್ ಕಾರ್ಡ್​  ಕೊಡಿಸಿದ್ದೂ ಅಲ್ಲದೇ ಕಾನ್​ಸ್ಟೇಬಲ್ ವೀರೇಂದ್ರ ಜೊತೆ ಸೇರಿ ಕಾರಿನ ವ್ಯವಸ್ಥೆಯನ್ನು ಪವನ್​ ಮಾಡಿಕೊಟ್ಟು, ಆಗುಂಬೆಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದ. ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಕುಮ್ಮಕ್ಕಿನಂತೆ  ಕೊಲೆ ನಡೆದಿತ್ತು.

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv