ದಕ್ಷಿಣ, ಉತ್ತರ ಕೊರಿಯಾ ನಾಯಕರಿಂದ ಮತ್ತೊಂದು ಮೀಟಿಂಗ್‌

ಹಾವು, ಮುಂಗುಸಿಯಂತಿದ್ದ ದಕ್ಷಿಣ ಮತ್ತು ಉತ್ತರ ಕೊರಿಯಾದ ನಾಯಕರ ಭೇಟಿಗೆ ಮತ್ತೊಮ್ಮೆ ವೇದಿಕೆ ಸಿದ್ಧವಾಗಿದೆ. ಇದೇ 13 ರಂದು ಉತ್ತರ ಕೊರಿಯಾದ ಅಧ್ಯಕ್ಷ ಕಿಮ್‌ ಜಾಂಗ್‌ವುನ್‌ ಮತ್ತು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ಇನ್‌ ಉತ್ತರದ ಪನ್‌ಮುನ್ಜೋಂ ಎಂಬಲ್ಲಿ ಮಾತುಕತೆ ನಡೆಸಲಿದ್ದಾರೆ. ಉಭಯ ದೇಶಗಳು ಈ ಹಿಂದಿನ ಶೃಂಗಸಭೆಯಲ್ಲಿ ಕೈಗೊಂಡಿರುವ ಒಪ್ಪಂದಗಳನ್ನು ಅನುಷ್ಠಾನ ಗೊಳಿಸುವ ಸಂಬಂಧ ಮಾತುಕತೆ ನಡೆಸಲಿವೆ. ಎರಡೂ ದೇಶಗಳ ನಡುವಿನ ಸ್ನೇಹ ಬಾಂಧವ್ಯಕ್ಕಾಗಿ ನಡೆಸುತ್ತಿರುವ 4ನೇ ಸಭೆ ಇದಾಗಿದೆ. ಕಳೆದ ಜೂನ್‌ನಲ್ಲಿ ಕಿಮ್‌ ಮತ್ತು ಮೂನ್‌ ಭೇಟಿಯಾಗಿದ್ರು. ಪನ್‌ಮುನ್ಜೋಂ ಯೋಜನೆಯ ಅನುಷ್ಠಾನವನ್ನು ಉತ್ತೇಜಿಸುವ ಮಾರ್ಗಗಳ ಕುರಿತು ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಸುದೀರ್ಘ ಚರ್ಚೆ ನಡೆಸಲಿವೆ ಅಂತ ಉತ್ತರ ಕೋರಿಯಾದ ಸಚಿವ ಚೋ ಮಿಯಾಂಗ್‌ ಗ್ಯಾನ್‌ ತಿಳಿಸಿದ್ದಾರೆ.