ಮಾವು ಮೇಳಕ್ಕೆ ಜನರಿಂದ ಭರ್ಜರಿ ರೆಸ್ಪಾನ್ಸ್​

ಕೊಪ್ಪಳ: ತೋಟಗಾರಿಕಾ ಇಲಾಖೆಯಿಂದ ನಗರದಲ್ಲಿ ಆಯೋಜಿಸಿದ್ದ 2ನೇ ವರ್ಷದ ಮಾವು ಮೇಳ ಈ ಬಾರಿ ದಾಖಲೆ ಮಾಡಿದ್ದು, ಜನರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೇಳದಲ್ಲಿ ಅಧಿಕವಾಗಿ ಮಾವು ಮಾರಾಟವಾಗಿದ್ದರಿಂದ ರೈತರು ಕೈ ತುಂಬಾ ಆದಾಯ ಗಳಿಸಿದ್ದಾರೆ. 14 ದಿನಗಳ ಮೇಳದಲ್ಲಿ 75ಕ್ಕೂ ಹೆಚ್ಚು ರೈತರು ಭಾಗವಹಿಸಿ ನಿತ್ಯ 8 ರಿಂದ 10 ಟನ್ ಮಾವು ಮಾರಾಟ ಮಾಡಿದ್ದಾರೆ. ಒಟ್ಟು 180 ಟನ್ ಮಾವು ಮಾರಾಟ ಮಾಡಿದ್ದಾರೆ. ಯಾವುದೇ ಮಧ್ಯವರ್ತಿಗಳ ಆವಳಿಯಿಲ್ಲದೆ ₹1.50 ಕೋಟಿ ವಹಿವಾಟು ನಡೆಸಿದ್ದಾರೆ. ರೈತರಿಗೆ ನೈಸರ್ಗಿಕವಾಗಿ ಮಾಗಿಸಿದ ಮಾವಿಗೆ ಮಾತ್ರ ಮೇಳದಲ್ಲಿ ಮಾರಲು ಅವಕಾಶ ನೀಡಲಾಗಿತ್ತು ಅಂತ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೃಷ್ಣ ಉಕ್ಕುಂದ್ ತಿಳಿಸಿದ್ದಾರೆ.