ಕೊಳ್ಳೆಗಾಲ ನಗರಸಭೆ 9ನೇ ವಾರ್ಡ್​ ಉಪಚುನಾವಣೆ: ಬಿಜೆಪಿ ಗೆಲುವು

ಚಾಮರಾಜನಗರ: ಕೊಳ್ಳೆಗಾಲ ನಗರಸಭೆ 9ನೇ ವಾರ್ಡ್​​​ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ನಾಗೇಂದ್ರ ಅವರು 71 ಮತಗಳ ಅಂತರದಿಂದ ಕಾಂಗ್ರೆಸ್​ ಅಭ್ಯರ್ಥಿ ವಿರುದ್ಧ ಜಯ ಗಳಿಸಿದ್ದಾರೆ.

ಗೆಲುವಿನ ನಗೆ ಬೀರಿದ ಬಳಿಕ ಮಾತನಾಡಿದ ನಾಗೇಂದ್ರ, ನನ್ನ ಗೆಲುವಿಗೆ ಕಾಂಗ್ರೆಸ್​​ನ ಸಂಸದ ಧ್ರುವನಾರಾಯಣ್​​ ಹಾಗೂ ಮಾಜಿ ಶಾಸಕ ಎಸ್​​. ಜಯಣ್ಣ ಅವರೇ ಕಾರಣ. ಅವರ ಆಡಳಿತದಲ್ಲಿ ನಮ್ಮ ವಾರ್ಡ್​ಗೆ ಬಂದು ಯಾವ ಕೆಲಸ ಮಾಡದಿರುವುದೇ ನನ್ನ ಗೆಲುವಿಗೆ ಕಾರಣ ಎಂದರು. ಇನ್ನು, ಬರುವ ಲೋಕಸಭಾ ಚುನಾವಣೆಯಲ್ಲಿ ಧ್ರುವ ನಾರಾಯಣ್​ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದು ಕಿಡಿಕಾರಿದರು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಾಗೇಂದ್ರ ಅವರಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿದರು.
9ನೇ ವಾರ್ಡ್​​ ಚುನಾವಣೆಯಲ್ಲಿ ಬಿಜೆಪಿ 577, ಕಾಂಗ್ರೆಸ್​​ 506, ನೋಟ 5, ಪಕ್ಷೇತರ ಅಭ್ಯರ್ಥಿಗಳು 5 ಮತಗಳನ್ನು ಗಳಿಸಿದ್ದಾರೆ.  

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv