ಸಂತಾನಹರಣ ಶಸ್ತ್ರಚಿಕಿತ್ಸೆ ಬಳಿಕ ಮಹಿಳೆ ಸಾವು

ಚಿಕ್ಕಬಳ್ಳಾಪುರ: ಸಂತಾನಹರಣ ಶಸ್ತ್ರ ಚಿಕಿತ್ಸೆ ಬಳಿಕೆ ಮಹಿಳೆಯೊರ್ವಳು ಅನುಮಾನಾಸ್ಫದವಾಗಿ ಮೃತಪಟ್ಟಿರುವ ಘಟನೆ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಗೋಪಸಂದ್ರ ಗ್ರಾಮದ 3೦ ವರ್ಷದ ವೀಣಾ ಮೃತ ಮಹಿಳೆ. ಮಹಿಳೆಯ ಸಾವಿನ ವಿಷಯ ತಿಳಿದ ಮೃತಳ ಸಂಬಂಧಿಕರು ಶಸ್ತ್ರ ಚಿಕಿತ್ಸೆ ನಡೆಸಿದ ವೈದ್ಯ ನರಸಿಂಹಮೂರ್ತಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ ಘಟನೆಯೂ ನಡೆದಿದೆ.
ವೈದ್ಯರ ನಿರ್ಲಕ್ಷದಿಂದಲೇ ಮಹಿಳೆ ಸಾವನಪ್ಪಿದ್ದಾರೆ ಎಂದು ಮೃತಳ ಗಂಡ ಮತ್ತು ಸಂಬಂಧಿಕರು ಆರೋಪಿಸಿದ್ದಾರೆ. ಆದ್ರೆ ಮಹಿಳೆಗೆ ಲೋ ಬಿಪಿಯಾದ ಕಾರಣ ಹೃದಯಾಘಾತವಾಗಿ ಸಾವನಪ್ಪಿರೋದಾಗಿ ವೈದ್ಯರು ಸಮರ್ಥಿಸಿಕೊಳ್ತಿದ್ದಾರೆ. ಇಷ್ಟಾದ್ರೂ ಸಂಬಂಧಿಕರು ನಿರ್ಲಕ್ಷ್ಯದ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ವೈದ್ಯ ನರಸಿಂಹಮೂರ್ತಿ ವಿರುದ್ದ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *