5 ವರ್ಷದ ಹಿಂದೆ ಆಕೆಯನ್ನ ನೋಡಬಯಸಿದ್ದ ವಿರಾಟ್ ಕೊಹ್ಲಿ..!

ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿಗೆ ಲೆಕ್ಕವಿಲ್ಲದಷ್ಟು ಮಹಿಳಾ ಅಭಿಮಾನಿಗಳಿದ್ದಾರೆ. ಕ್ರೀಡಾಂಗಣದಲ್ಲಂತೂ ಪ್ರತಿ ಮ್ಯಾಚ್​ನಲ್ಲೂ ವಿರಾಟ್​ ಐ ಲವ್ ಯೂ ಅನ್ನೋ ಪೋಸ್ಟರ್​ ರಾರಾಜಿಸುತ್ತಿರುತ್ತವೆ. ವಿರಾಟ್​ 2017ರಲ್ಲಿ ತನ್ನ ಮನದರಸಿ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರನ್ನ ವರಿಸಿ ಬ್ಯಾಚುಲರ್​ ಲೈಫ್​ ಫಿನಿಶ್ ಮಾಡಿದ್ದಕ್ಕೆ ಕೆಲ ಲೇಡಿ ಫ್ಯಾನ್ಸ್​ ಬೇಸರ ಪಟ್ಕೊಂಡಿದ್ದೂ ಇದೆ. ಆದ್ರೂ ಕೊಹ್ಲಿಗಿರೋ ಡಿಮ್ಯಾಂಡ್ ಕೊಂಚವೂ ಕಡಿಮೆಯಾಗಿಲ್ಲ ಅನ್ನೋದು ಗೊತ್ತಿರೋ ಸಂಗತಿ. ಅದೆಷ್ಟೋ ಜನ ಒಮ್ಮೆಯಾದ್ರೂ ಕೊಹ್ಲಿಯನ್ನ ಮೀಟ್ ಮಾಡೋ ಚಾನ್ಸ್​ ಸಿಕ್ಕಿದ್ರೆ ಸಾಕು ದೇವರೆ ಅಂತಾ ಕಾಯ್ತಾ ಇದ್ದಾರೆ.

ಆದ್ರೆ ವಿರಾಟ್ ಕೊಹ್ಲಿ​ ಕೆಲ ವರ್ಷಗಳ ಹಿಂದೆ ಒಬ್ಬ ಮಹಿಳೆಯನ್ನ ಭೇಟಿಯಾಗಬೇಕು ಅಂತ ಸಿಕ್ಕಾಪಟ್ಟೆ ಕಾದಿದ್ದರಂತೆ. ಈ ವಿಷಯ ಈಗ ಭಾರೀ ಚರ್ಚೆಯಾಗುತ್ತಿದೆ. ಆದ್ರೆ, ಆ ಲೇಡಿ ಅನುಷ್ಕಾ ಅಲ್ಲ ಅನ್ನೋದು ಮತ್ತೊಂದು ಇಂಟರೆಸ್ಟಿಂಗ್ ವಿಚಾರ. 5 ವರ್ಷಗಳ ಹಿಂದೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸಾರಾ ಟೇಯ್ಲರ್​ ಅವರನ್ನ ಭೇಟಿ ಮಾಡುವ ಆಸೆ ಕೊಹ್ಲಿಗಿತ್ತಂತೆ. ಹೀಗಂತ ಇಂಗ್ಲೆಂಡ್ ಆಟಗಾರ್ತಿ ಕೇಟ್ ಕ್ರಾಸ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ ಜೊತೆಗೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿ ಸಾರಾ ಹಾಗೂ ಕೊಹ್ಲಿಗೆ ಟ್ಯಾಗ್ ಮಾಡಿದ್ದಾರೆ.