ಪಾಂಡ್ಯ-ರಾಹುಲ್​ ವಿವಾದದ ಬಗ್ಗೆ ಕೊಹ್ಲಿ ಹೇಳಿದ್ದೇನು​​..?

ಕಳೆದ ಕೆಲವು ದಿನಗಳಿಂದ ವಿವಾದದ ಕೇಂದ್ರ ಬಿಂದು ಆಗಿರುವ ಕೆ. ಎಲ್​. ರಾಹುಲ್​ ಮತ್ತು ಹಾರ್ದಿಕ್​ ಪಾಂಡ್ಯರ ಕಾಫಿ ವಿತ್​ ಕರಣ್​ ಟಾಕ್​ ಶೋ ಬಗ್ಗೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ತುಟಿ ಬಿಚ್ಚಿದ್ದಾರೆ. ವೈಯಕ್ತಿಕ ಅಭಿಪ್ರಾಯಗಳನ್ನ ಕ್ರಿಕೆಟ್​ ಜೊತೆ ಸೇರಿಸಬೇಡಿ ಎಂದಿರುವ ಕೊಹ್ಲಿ. ಕ್ರಿಕೆಟ್​ ವಿಷಯಕ್ಕೆ ಬಂದರೆ ನಾವೆಲ್ಲರು ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಕ್ರಿಕೆಟ್​ ಜೊತೆ ವೈಯಕ್ತಿಕ ಅಭಿಪ್ರಾಯಗಳನ್ನ ತರುವುದು ಎಷ್ಟು ಸರಿ ಎಂದಿದ್ದಾರೆ. ಕರಣ್​ ಜೋಹರ್​ ಕಾರ್ಯಕ್ರಮದಲ್ಲಿ ರಾಹುಲ್​ ಮತ್ತು ಪಾಂಡ್ಯ ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನ ಹೊರ ಹಾಕಿದ್ದಾರೆ. ಹಾಗಾಗಿ ಕ್ರಿಕೆಟ್​​​ ಜೊತೆ ಈ ವಿಷಯವನ್ನ ಸೇರಿಸಬೇಡಿ ಎಂದಿದ್ದಾರೆ. ‘ಕಾಫಿ ವಿತ್​ ಕರಣ್​’ ಟಾಕ್​ ಶೋನಲ್ಲಿ ಭಾಗವಹಿಸಿದ್ದ ರಾಹುಲ್​​ ಮತ್ತು ಪಾಂಡ್ಯ​​ ಹೇಳಿಕೆಗಳು ಹಲವು ವಿವಾದಗಳನ್ನ ಹುಟ್ಟುಹಾಕಿದ್ದವು. ಈ ಬಗ್ಗೆ ಅಭಿಮಾನಿಗಳೂ ಸೇರಿದಂತೆ ಬಿಸಿಸಿಐ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬಗ್ಗೆ ಸ್ಪಷ್ಟನೆ ಕೇಳೆ ನೋಟಿಸ್ ಜಾರಿ ಮಾಡಿದ್ದ ಬಿಸಿಸಿಐ, ಕಠಿಣ ನಿರ್ಧಾರ ತೆಗೆದುಕೊಳ್ಳುವ ಸೂಚನೆ ನೀಡಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: conatct@firstnews.tv