ಸರ್ಕಾರದ ಬಗ್ಗೆ ಕೋಡಿಶ್ರೀ ಭವಿಷ್ಯ, ಈ ಬಾರಿ ತಾಳೆಗರಿ ನುಡಿದಿದ್ದೇನು?

ಮೈಸೂರು: ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ಇನ್ನು ಎರಡು ತಿಂಗಳು ತಡೆಯಿರಿ. ಮುಂದೆ ಏನು ಆಗುತ್ತೆ ಅಂತಾ ಕಾದು ನೋಡಿ! ಅಂತಾ ಕೋಡಿ ಮಹಾ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ನಡೆದ ರಾಜಮನೆತನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರದ ಸ್ಥಿರತೆ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ, ಈ ಬಾರಿ ವರ್ಷಪೂರ್ತಿ ಮಳೆ ಹೆಚ್ಚಿರುತ್ತೆ. ಕಾರ್ತಿಕ ಮಾಸದಲ್ಲಿ ಇನ್ನೂ ಹೆಚ್ಚಿಗೆ ಮಳೆಯಾಗಲಿದೆ ಅಂತಾ ಭವಿಷ್ಯ ನುಡಿದರು.

ಸರ್ಕಾರದ ಭವಿಷ್ಯದ ಬಗ್ಗೆ ಕೋಡಿ‌ಮಠದ ಸ್ವಾಮೀಜಿ ಹೇಳಿಕೆಯ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಸಾ.ರಾ ಮಹೇಶ್, ಈಗಾಗಲೇ ಸರ್ಕಾರದ ಭವಿಷ್ಯ ಬಗ್ಗೆ ಸಾಕಷ್ಟು ಸ್ವಾಮೀಜಿಗಳು ಭವಿಷ್ಯ ಹೇಳಿದ್ದಾರೆ. ಅದೆಲ್ಲವೂ ಸುಳ್ಳಾಗಿದೆ. ಕೋಡಿಮಠದ ಸ್ವಾಮೀಜಿಗಳ ಬಗ್ಗೆ ಅಪಾರ ಗೌರವವಿದೆ. ಅವರ‌ ವಿಚಾರದಲ್ಲಿ ಎಲ್ಲವನ್ನೂ‌ ನಂಬುತ್ತೇವೆ. ಈ ‌ರೀತಿ ಹೇಳಿಕೆಗಳನ್ನು ಕೊಟ್ಟಾಗ ಇರುವ ನಂಬಿಕೆಗಳೂ ನಶಿಸುತ್ತವೆ. ಸ್ವಾಮೀಜಿ ರಾಜಕಾರಣ ಮಾಡಬಾರದು ಅಂತಾ ಹೇಳಿದರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv