‘ಟಿಪ್ಪು ಹುಟ್ಟಿದ್ದಕ್ಕೆ ಕುಶಾಲನಗರ ಅಂದ್ರು, ಅದು ಈಗ ನಮಗ್ಯಾಕೆ.?’

ಕೊಡಗು: ಕೊಡಗಿನ ಹೆಬ್ಬಾಗಿಲಾಗಿರುವ ಕುಶಾಲನಗರಕ್ಕೆ ಬೇರೆ ನಾಮಕರಣ ಮಾಡುವಂತೆ ಕೊಡವ ನ್ಯಾಷನಲ್ ಕೌನ್ಸಿಲ್ ಆಗ್ರಹಿಸಿದೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ, ಕುಶಾಲನಗರದ ಮೊದಲ ಹೆಸರು ಫ್ರೆಜರ್ ಪೇಟೆ ಎಂದಿತ್ತು. ಹೈದರಾಲಿಗೆ, ಟಿಪ್ಪು ಜನಿಸಿದ ಬಳಿಕ ಕುಶಾಲನಗರ ಎಂದು ಬದಲಿಸಲಾಗಿದೆ. ಆದ್ರೆ ಟಿಪ್ಪು ಜನಿಸಿದ ಖುಷಿಯ ವಿಚಾರಕ್ಕೆ ಇಡಲಾದ ಹೆಸರಿನ ಅಗತ್ಯ ನಮಗಿಲ್ಲ. ಹೀಗಾಗಿ ಅದನ್ನು ಬದಲಿಸಬೇಕೆಂದು ಅಭಿಪ್ರಾಯಪಟ್ಟರು. ಮೊದಲಿದ್ದ ಫ್ರೆಜರ್ ಪೇಟೆ(ಬ್ರಿಟೀಷ್ ಅಧಿಕಾರಿ ಹೆಸರು) ಎಂಬ ಹೆಸರನ್ನು ಸರ್ಕಾರ ಮರು ನಾಮಕರಣ ಮಾಡಲಿ. ಇಲ್ಲವಾದಲ್ಲಿ ಟಿಪ್ಪುವಿನ ಸೈನ್ಯದ ವಿರುದ್ಧ ಹೋರಾಡಿದ್ದ ಕೊಡಗಿನ ಕುಲ್ಲೇಟಿರ ಪೊನ್ನಣ್ಣ ಅವರ ಹೆಸರನ್ನಿಡಬೇಕು. ಈ ಸಂಬಂಧ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನದಲ್ಲಿ ಸಿಎನ್​ಸಿ ವತಿಯಿಂದ ನಿರಂತರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದ್ರು.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv