ಕೊಡಗಿನಲ್ಲಿ ಎಲ್ಲೆಲ್ಲಿ, ಎಷ್ಟೆಷ್ಟು ಮಳೆಯಾಗಿದೆ?

ಕೊಡಗು: ಜಿಲ್ಲೆಯಲ್ಲಿ ಯಾವ ಟೈಮಲ್ಲಿ ಹೇಗೆ ಮಳೆಯಾಗುತ್ತೆ ಅಂತ ಊಹಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಕೆಲ ಹೊತ್ತು ಸೂರ್ಯನ ದರ್ಶನ ಆಗುತ್ತಿದ್ರೆ, ದಿಢೀರನೆ ಭಾರೀ ಮಳೆಯೂ ಆಗುತ್ತಿದೆ. ಗುರುವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 85.06 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 23.48 ಮಿ.ಮೀ. ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 1034.72 ಮಿ.ಮೀ. ಮಳೆಯಾಗಿದೆ.

ಭಾಗಮಂಡಲದಲ್ಲಿ 195 ಮಿ.ಮೀ., ಸಂಪಾಜೆ 156, ನಾಪೋಕ್ಲು 131, ಮಡಿಕೇರಿ 111.80 ಮಿ.ಮೀ. ದಾಖಲೆಯ ಮಳೆಯಾಗಿದೆ. ಉಳಿದಂತೆ ಹುದಿಕೇರಿಯಲ್ಲಿ 98.50 ಮಿ.ಮೀ., ವಿರಾಜಪೇಟೆ 94.20 ಮಿ.ಮೀ., ಶ್ರೀಮಂಗಲ 88.40 ಮಿ.ಮೀ, ಪೊನ್ನಂಪೇಟೆ 80.20 ಮೀ.ಮೀ, ಅಮ್ಮತಿ 51.50, ಬಾಳೆಲೆ 38.50, ಸೋಮವಾರಪೇಟೆ 45.40, ಶನಿವಾರಸಂತೆ 31.40, ಶಾಂತಳ್ಳಿ 64.20, ಕೊಡ್ಲಿಪೇಟೆ 16, ಸುಂಟಿಕೊಪ್ಪ 10, ಕುಶಾಲನಗರ 22 ಮಿ.ಮೀ. ಮಳೆಯಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ:contact@firstnews.tv