ಅಬ್ಬರದ ನಡುವೆ ಸ್ವಲ್ಪ ಬ್ರೇಕ್​ ತೆಗೆದುಕೊಂಡ ಮಳೆರಾಯ.!

ಕೊಡಗು: ಜಿಲ್ಲೆಯಲ್ಲಿ ಕಳೆದ ಮೂರು ದಿನ ಅಬ್ಬರಿಸಿದ್ದ ಮಳೆ ಇಂದು ಕೊಂಚ ಕ್ಷೀಣವಾಗಿದೆ. ಆದ್ರೆ ಗಾಳಿ ಮಳೆಯ ಅವಾಂತರ ಮಾತ್ರ ಮುಂದುವರೆದಿದೆ. ಹಲವೆಡೆ ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದಿರೋದ್ರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡು ಬಹುತೇಕ ಗ್ರಾಮಗಳು ಕತ್ತಲಲ್ಲಿ ಮುಳುಗಿವೆ. ಭಾಗಮಂಡಲದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದು, ತಲಕಾವೇರಿಗೆ ತೆರಳಲು ಭಕ್ತರು, ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧದವನ್ನು ಜಿಲ್ಲಾಡಳಿತ ಹಿಂಪಡೆದಿದೆ. ಮತ್ತೊಂದೆಡೆ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ಪಾತ್ರದ ಜನ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಿದ್ದಾಪುರ ಬಳಿಯ ಕರಡಿಗೋಡಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಗಂಜಿ ಕೇಂದ್ರ ತೆರೆಯಲಾಗಿದೆ.

ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಶಾಂತಳ್ಳಿ(196 ಮಿಲಿ ಮೀಟರ್​), ಭಾಗಮಂಡಲದಲ್ಲಿ( 174ಮಿಲಿ ಮೀಟರ್​.) ದಾಖಲಾಗಿದೆ. ಉಳಿದಂತೆ ಮಡಿಕೇರಿ 71.20, ನಾಪೋಕ್ಲು 131.20, ಸಂಪಾಜೆ 90.20, ವಿರಾಜಪೇಟೆ 104, ಹುದಿಕೇರಿ 124, ಶ್ರೀಮಂಗಲ 118.20, ಪೊನ್ನಂಪೇಟೆ 82.20, ಅಮ್ಮತಿ 71, ಬಾಳೆಲೆ 58, ಸೋಮವಾರಪೇಟೆ 138.80, ಶನಿವಾರಸಂತೆ 101.40, ಕೊಡ್ಲಿಪೇಟೆ 135.50, ಸುಂಟಿಕೊಪ್ಪ 42, ಕುಶಾಲನಗರ 11 ಮಿಲಿ ಮೀಟರ್​ ಮಳೆಯಾಗಿದೆ.
ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ104.56 ಮಿಲಿ ಮೀಟರ್​ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 22.60 ಮಿಲಿ ಮೀಟರ್​ ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 761.49 ಮಿಲಿ ಮೀಟರ್​. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 369.68 ಮಿ.ಮೀ ಮಳೆಯಾಗಿತ್ತು.
ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ116.65 ಮಿಲಿ ಮೀಟರ್​ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 26.60 ಮಿಲಿ ಮೀಟರ್​ ಮಳೆಯಾಗಿತ್ತು.( ಜನವರಿಯಿಂದ ಇಲ್ಲಿಯವರೆಗೆ 1056.94 ಮಿಲಿ ಮೀಟರ್​).
ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ 92.90 ಮಿಲಿ ಮೀಟರ್​. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 16.67 ಮಿಲಿ ಮೀಟರ್​ ಮಳೆಯಾಗಿತ್ತು.(ಜನವರಿಯಿಂದ ಇಲ್ಲಿಯವರೆಗೆ 598.07 ಮಿಲಿ ಮೀಟರ್​.),
ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ 104.12 ಮಿಲಿ ಮೀಟರ್​ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 24.53 ಮಿಲಿ ಮೀಟರ್​  ಮಳೆಯಾಗಿತ್ತು.(ಜನವರಿಯಿಂದ ಇಲ್ಲಿಯವರೆಗೆ 629.46 ಮಿಲಿ ಮೀಟರ್​).

ಹಾರಂಗಿ ಜಲಾಶಯದ ನೀರಿನ ಮಟ್ಟ.
ಹಾರಂಗಿ ಜಲಾಶಯದ ಮಟ್ಟ 2,859 ಅಡಿ.
ಇಂದಿನ ಮಟ್ಟ 2806.80 ಅಡಿ.(ಕಳೆದ ವರ್ಷ ಇದೇ ದಿನ 2808.07 ಅಡಿ.)
ಒಳಹರಿವು 4780 ಕ್ಯೂಸೆಕ್(ಕಳೆದ ವರ್ಷ ಇದೇ ದಿನ ಒಳಹರಿವು 345 ಕ್ಯೂಸೆಕ್.)

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗಾಗಿ ಸಂಪರ್ಕಿಸಿ: contact@firstnews.tv