ಜಿಲ್ಲಾಡಳಿತದ ತೀರ್ಮಾನಕ್ಕೆ ಒಪ್ಪುತ್ತಾರಾ ಜೀಪ್​ ಡ್ರೈವರ್​ಗಳು

ಕೊಡಗು: ಮಡಿಕೇರಿ ಬಳಿಯ ಪ್ರವಾಸಿ ತಾಣ ಮಾಂದಲಪಟ್ಟಿಗೆ ಬಾಡಿಗೆಗೆ ತೆರಳುವ ಖಾಸಗಿ ಜೀಪ್‌ಗಳಿಗೆ ಜಿಲ್ಲಾಡಳಿತ ದರ ನಿಗದಿಪಡಿಸಿದೆ. ಈ ಬಗ್ಗೆ, ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೆಲವು ದಿನಗಳ ಹಿಂದೆ ಕೇಂದ್ರ ಸಚಿವ ಸದಾನಂದ ಗೌಡರ ಮಗ ಇಲ್ಲಿಗೆ ಬಂದಿದ್ದ ವೇಳೆ ಬಾಡಿಗೆ ವಿಚಾರವಾಗಿ ಸ್ಥಳೀಯರ ಜತೆ ಗಲಾಟೆ ನಡೆದಿತ್ತು. ಇಲ್ಲಿನ ಜೀಪ್ ಚಾಲಕರು ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರುತ್ತಿದ್ದಾರೆ. ಅಲ್ಲದೇ, ಮನಸೋಯಿಚ್ಛೆ ಬಾಡಿಗೆ ಪಡೆಯುತ್ತಾರೆಂಬ ಆರೋಪವಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮಡಿಕೇರಿಯಿಂದ ಮಾಂದಲಪಟ್ಟಿ ಪ್ರವೇಶ ದ್ವಾರದವರೆಗೆ 800 ರೂ, ಪ್ರವೇಶ ದ್ವಾರದಿಂದ ವ್ಯೂ ಪಾಯಿಂಟ್‌ಗೆ 300 ರೂ, ಬಾಡಿಗೆಯನ್ನು ಜಿಲ್ಲಾಡಳಿತ ಕೆಲವು ದಿನದ ಹಿಂದೆ ನಿಗದಿಪಡಿಸಿತ್ತು. ಆದ್ರೆ, ಜೀಪ್ ಚಾಲಕರು ಜಿಲ್ಲಾಡಳಿತದ ಈ ತೀರ್ಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌. ಮಾಂದಲಪಟ್ಟಿ ರಸ್ತೆ ತೀರಾ ಹದಗೆಟ್ಟಿರುವುದರಿಂದ ನಿಗದಿತ ಹಣಕ್ಕೆ ಬಾಡಿಗೆ ತೆರಳಲಾಗುವುದಿಲ್ಲ. ಈ ಬಗ್ಗೆ ಮರುಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆ ಮನವಿ ಸಲ್ಲಿಸೋದಾಗಿ ಜೀಪ್ ಚಾಲಕರು ತಿಳಿಸಿದ್ದಾರೆ.

ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv