ಇದು ಚಿರತೆಯೇ ಅಲ್ವಂತೆ… ಮತ್ತೆ ಏನಿಬರಹುದು..?

ಕೊಡಗು: ಮಡಿಕೇರಿ ತಾಲೂಕು ನಾಪೋಕ್ಲು ಬಳಿಯ ಚೆರಿಯಪರಂಬು ಗ್ರಾಮಕ್ಕೆ ಚಿರತೆ ಬಂದಿದೆಯಂತೆ.. ಹೀಗಂತ ಒಂದು ವಾರದಿಂದ ಸುದ್ದಿಯೊಂದು ಹಬ್ಬಿತ್ತು. ಇದಕ್ಕೆ ಪೂರಕವಾಗಿ ಎರಡು ಚಿರತೆ ಮರಿಗಳು ಮನೆ ಬಳಿಯ ತೋಟದಲ್ಲಿ ಓಡಾಡುವ ವಿಡಿಯೋ ಹಾಗೂ ಫೋಟೋಗಳು ಕೂಡಾ ಒಬ್ಬರಿಂದೊಬ್ಬರಿಗೆ ಹರಿದಾಡಿ ಜನರಲ್ಲಿ ಆತಂಕ ಮೂಡಿಸಿತ್ತು.

ಆದ್ರೆ ಅಸಲಿಗೆ ಆ ವೀಡಿಯೋದಲ್ಲಿರುವುದು ಚಿರತೆಯೇ ಅಲ್ವಂತೆ! ಹಂಗಂತ ಹೇಳಿರೋದು ಭಾಗಮಂಡಲ ಆರ್​ಎಫ್​ಓ ಚಂಗಪ್ಪ. ಅವರು ಅಲ್ಲಲ್ಲಿ ಹರಿದಾಡುತ್ತಿದ್ದ ವಿಡಿಯೋ ನೋಡಿದ ಬಳಿಕ ಅದು ಚಿರತೆ ಮರಿ ಅಲ್ಲ.. ಕಾಡು ಬೆಕ್ಕು ಜಾತಿಗೆ ಸೇರಿದ ದೊಡ್ಡ ಜೀವಿ ಅಂತ ಖಚಿತಪಡಿಸಿದ್ರು. ಆದ್ರೆ ಆ ಪ್ರಾಣಿಯ ಬಣ್ಣ ಚಿರತೆಯಂತೆ ಇದ್ದ ಕಾರಣಕ್ಕೆ ಜನರಲ್ಲಿ ಗೊಂದಲ ಮೂಡಿಸಿದೆ ಎಂದರು. ಈ ವಿಷಯ ಕೇಳಿದ ಜನ ಇದೀಗ ಅಬ್ಬಾ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv