ಕೆಸರಿನಲ್ಲಿ ಸಿಲುಕಿಕೊಂಡ ಬಸ್​ ಲಾರಿ ಟಯರ್ ​ಕೊಡಗು- ಕೇರಳ ಸಂಪರ್ಕ ರಸ್ತೆ ಕಡಿತ

ಕೊಡಗು: ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು, ಕೆಸರಿನಲ್ಲಿ ಬಸ್ – ಲಾರಿ ಸಿಲುಕಿಕೊಂಡ ಘಟನೆ ವಿರಾಜಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ. ಇಂದು ಮುಂಜಾನೆ 3 ಗಂಟೆ ವೇಳೆಗೆ ಘಟನೆ ನಡೆದಿದೆ.

ಕೇರಳ ಮೂಲದ ಲಾರಿ, ಕರ್ನಾಟಕ ಮೂಲದ ಖಾಸಗಿ ಬಸ್​ನ ಟಯರ್​ ಕೆಸರಿನಲ್ಲಿ ಹೂತು ಹೋಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿದೆ. ಪ್ರಯಾಣಿಕರಿಗೆ ದಿಕ್ಕು ತೋಚದೇ, ಬಸ್​ನಲ್ಲೇ ಕೂತು ಕಾಲ ಕಳೆದಿದ್ದಾರೆ. ಇದರಿಂದ ಕೊಡಗು- ಕೇರಳ ಸಂಪರ್ಕ ರಸ್ತೆ ಕಡಿತಗೊಂಡಿದೆ.
ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv