ಮಂಜಿನ ನಗರಿಯಲ್ಲಿ ವರುಣನ ನಾಗಾಲೋಟ.. ಈ ವರ್ಷದ ಮಳೆಯ ಸ್ಟೇಟಸ್​ ಏನ್ ಗೊತ್ತಾ..?

ಕೊಡಗು: ಜಿಲ್ಲೆಯಲ್ಲಿ ಕೆಲವು ದಿನಗಳ ಕಾಲ ವಿರಾಮ ನೀಡಿದ್ದ ಮಳೆರಾಯ ಮತ್ತೆ ಅಬ್ಬರಿಸುತ್ತಿದ್ದಾನೆ. ಅದರಲ್ಲೂ ಮಡಿಕೇರಿ, ಸೋಮವಾರಪೇಟೆ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಗುರುವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಜಿಲ್ಲೆಯಲ್ಲಿ ಸರಾಸರಿ 69.01 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ ಒಟ್ಟು 1312.24 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 656.86 ಮಿ.ಮೀ ಮಳೆಯಾಗಿತ್ತು.
ಎಲ್ಲೆಲ್ಲಿ, ಎಷ್ಟೆಷ್ಟು ಮಳೆಯಾಗಿದೆ ಗೊತ್ತಾ..?
ಭಾಗಮಂಡಲ 160, ಮಡಿಕೇರಿ 86.2, ನಾಪೋಕ್ಲು 108.2, ಸಂಪಾಜೆ 91.20, ವಿರಾಜಪೇಟೆ 66, ಹುದಿಕೇರಿ 68, ಶ್ರೀಮಂಗಲ 61.80, ಪೊನ್ನಂಪೇಟೆ 36.60, ಅಮ್ಮತಿ 36, ಬಾಳೆಲೆ 22, ಸೋಮವಾರಪೇಟೆ 53.40, ಶನಿವಾರಸಂತೆ 39, ಶಾಂತಳ್ಳಿ 80.20, ಕೊಡ್ಲಿಪೇಟೆ 44.40, ಕುಶಾಲನಗರ 26, ಶುಂಟಿಕೊಪ್ಪ 38.40 ಮಿ.ಮೀ. ಮಳೆಯಾಗಿದೆ.
ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 111.40 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 1792.09 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 858.70 ಮಿ.ಮೀ. ಮಳೆಯಾಗಿತ್ತು.
ವಿರಾಜಪೇಟೆ ತಾಲ್ಲೂಕಿನಲ್ಲಿ ಸರಾಸರಿ 48.73 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 1215.73 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 606.99 ಮಿ.ಮೀ. ಮಳೆಯಾಗಿತ್ತು.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಸರಾಸರಿ 46.90 ಮಿ.ಮೀ. ಮಳೆಯಾಗಿದೆ. ಜನವರಿಯಿಂದ ಇಲ್ಲಿಯವರೆಗೆ 928.91 ಮಿ.ಮೀ. ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 504.9 ಮಿ.ಮೀ. ಮಳೆಯಾಗಿತ್ತು.
ಹಾರಂಗಿ ಜಲಾಶಯದ ನೀರಿನ ಮಟ್ಟ
ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ. ಇಂದಿನ ನೀರಿನ ಮಟ್ಟ 2842.68 ಅಡಿ. ಕಳೆದ ವರ್ಷ ಇದೇ ದಿನ 2820.06 ಅಡಿ ನೀರಿತ್ತು. ಈಗಿನ ಒಳಹರಿವು 3292 ಕ್ಯುಸೆಕ್ ಇದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv