ಕೊಡಗಿನ ಮಳೆಗೆ ಬೆಚ್ಚಿದ ಜಿಲ್ಲಾಧಿಕಾರಿ ಶ್ರೀವಿದ್ಯಾ

ಕೊಡಗು: ಕೊಡಗಿನಲ್ಲಿ ನಿಲ್ಲದ ಧಾರಾಕಾರ ಮಳೆಯ ಅವಾಂತರದ ಬಿಸಿ ಜಿಲ್ಲಾಧಿಕಾರಿಗೂ ತಟ್ಟಿದೆ. ಕೊಡಗು ಜಿಲ್ಲಾಧಿಕಾರಿ ಶ್ರಿವಿದ್ಯಾ ಬಂಗಲೆ ಬಳಿ ಮರಗಳು ಉರುಳಿ ಬಿದ್ದಿವೆ. ಅವರ ಮನೆಯೂ ಭಾಗಶಃ ಹಾನಿಗೊಳಗಾಗಿದೆ. ಡಿಸಿ ಮನೆಯ ಕಾವಲು ಸಿಬ್ಬಂದಿ ಮನೆ ಸಂಪೂರ್ಣ ಜಖಂ ಆಗಿದೆ.

ಕಳೆದ‌ ರಾತ್ರಿ ಸುರಿದ ಗಾಳಿ ಮಳೆಗೆ ಮಡಿಕೇರಿ ನಗರದ ಸುದರ್ಶನ ವೃತ್ತದ ಬಳಿ ಇರುವ ಡಿಸಿ ಬಂಗಲೆ ಸಮೀಪ ನಾಲ್ಕು ಮರಗಳು ಉರುಳಿವೆ. ಸ್ಥಳಕ್ಕೆ ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ‌ ಸಿಬ್ಬಂದಿ ದೌಡಾಯಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮರ ತೆರವು ಕಾರ್ಯಾಚರಣೆ ನಡೆಸಿದರು. ಇನ್ನು ಯಾವುದೇ ಅಪಾಯವಿಲ್ಲದೆ ಡಿಸಿ ಶ್ರಿವಿದ್ಯಾ ಪಾರಾಗಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv