ಕಾಂಗ್ರೆಸ್​​ ಮುಖಂಡ ರಾಜಣ್ಣ ನಮಗೆ ಬೆಂಬಲ ನೀಡ್ತಾರೆ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

ತುಮಕೂರು: ಕೆ.ಎನ್ ರಾಜಣ್ಣನವರ ಬೆಂಬಲ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ನಮಗೆ ಬೆಂಬಲ ನೀಡ್ತಾರೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ. ಮಧುಗಿರಿಯಲ್ಲಿ  ಬಿಜೆಪಿ ಪರವಾಗಿ ಪ್ರಚಾರ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈತ್ರಿ ಬಗ್ಗೆ ಬೇಸರ ಇರುವುದಾಗಿ ರಾಜಣ್ಣ  ಈ ಹಿಂದೆ ಮಾಧ್ಯಮಗಳಲ್ಲಿ ಹೇಳಿದ್ದಾರೆ. ಹಾಗಾಗಿ ಆಂತರಿಕವಾಗಿ ನಮಗೆ ಬೆಂಬಲ ನೀಡುತ್ತಾರೆ ಅನ್ನೋವಿಶ್ವಾಸವಿದೆ. ಅವರ ನಾಮಪತ್ರವನ್ನು ಒತ್ತಾಯದಿಂದ ತೆಗೆಸಿದ್ದಾರೆ. ಹಾಗಾಗಿ‌ ಅವರಿಗೆ ಮೈತ್ರಿಯಲ್ಲಿ ಅಸಮಾಧಾನ ಇದೆ. ರಾಜಣ್ಣನವರ ಅಸಮಾಧಾನ ನಮಗೆ ಅನುಕೂಲವಾಗಲಿದೆ ಅಂತಾ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ರು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv