ಕೆಎಂಎಫ್ ಉತ್ಪನ್ನಗಳ ಮೇಲೆ ಮತ ಜಾಗೃತಿ ಸಂದೇಶ ಮುದ್ರಣ

ಧಾರವಾಡ: ಧಾರವಾಡ ಜಿಲ್ಲಾ ಸ್ವೀಪ್ ಸಮಿತಿ ಸಹಯೋಗದಲ್ಲಿ ಧಾರವಾಡದಲ್ಲಿ ಕೆಎಂಎಫ್‌ನಿಂದ ವಿನೂತನ ಪ್ರಯೋಗ ನಡೆಸಲಾಗಿದೆ. ಹಾಲಿನ ಪಾಕೇಟ್ ಮೇಲೆ‌ ಮತಜಾಗೃತಿಯ ಸಂದೇಶವನ್ನ ಮುದ್ರಣ ಮಾಡಲಾಗಿದೆ. ಹಾಲಿನ ಬಳಕೆಯ ದಿನಾಂಕದ ಜೊತೆಯಲ್ಲಿಯೇ ಮತದಾರರಿಗೆ ಜಾಗೃತಿ ಮೂಡಿಸುವ ಸಂದೇಶವನ್ನ ಇದೀಗ ಕೆಎಂಎಫ್ ಮುದ್ರಿಸಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಪರೀಕ್ಷಿಸಿಕೊಳ್ಳಿ ಎಂದು ಇಂಗ್ಲೀಷ್‌ನಲ್ಲಿ ಮುದ್ರಣ ಮಾಡಲಾಗಿದೆ. ಇನ್ನು ಮತದಾರರ ಪಟ್ಟಿಗೆ ಸೇರ್ಪಡೆಯಾಗುವ ಟೋಲ್ ಫ್ರಿ ನಂಬರ್ ಸಹಿತ ಹಾಕಲಾಗಿದೆ. ಧಾರವಾಡ, ಹಾವೇರಿ,ಗದಗ, ಉತ್ತರ ಕನ್ನಡ ಜಿಲ್ಲೆಯ ಕೆಎಂಎಫ್ ಉತ್ಪನ್ನಗಳ ಮೇಲೆ ಮತ ಜಾಗೃತಿ ಸಂದೇಶ ಮುದ್ರಣವಾಗಿದೆ.


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv