ಆಸ್ಟ್ರೇಲಿಯಾ ಸರಣಿಗೆ ಕೆ.ಎಲ್.ರಾಹುಲ್ ಡೌಟ್..?

ಇದೇ ತಿಂಗಳು 24ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 2 ಟಿ-ಟ್ವೆಂಟಿ ಮತ್ತು 5 ಏಕದಿನ ಪಂದ್ಯಗಳ ಸರಣಿಗೆ, ಕೆ.ಎಲ್.ರಾಹುಲ್ ಆಯ್ಕೆಯಾಗೋದು ಅನುಮಾನವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟಿ-ಟ್ವೆಂಟಿ ಮತ್ತು ಟೆಸ್ಟ್ ಸರಣಿಯಲ್ಲೂ ಫ್ಲಾಪ್ ಶೋ ನೀಡಿರೋ ರಾಹುಲ್, ಕಳೆದ ಒಂದು ವರ್ಷದಿಂದ ಬ್ಯಾಡ್​ ಫಾರ್ಮ್​ಗೆ ಸಿಲುಕಿ ರನ್​ಗಳಿಸಲು ಪರದಾಡ್ತಿದ್ದಾರೆ. ರಾಹುಲ್​ರ ಕಳಪೆ ಫಾರ್ಮ್, ಟೀಮ್ ಇಂಡಿಯಾ ಆಯ್ಕೆಗಾರರ ನೆದ್ದೆಗೆಡಿಸಿದೆ. ಯಸ್..! ಈಗಾಗಲೇ ಆಸ್ಟ್ರೇಲಿಯಾ ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗೆ ತಂಡವನ್ನ ಪ್ರಕಟಿಸಿದೆ. ಆದ್ರೆ ಟೀಮ್ ಇಂಡಿಯಾ ಮಾತ್ರ, ಇನ್ನೂ ತಂಡವನ್ನ ಪ್ರಕಟಿಸಿಲ್ಲ. ಕೆಲವೇ ದಿನಗಳಲ್ಲಿ ಆಸಿಸ್ ಸರಣಿಗೆ ತಂಡವನ್ನ ಆಯ್ಕೆ ಮಾಡಲಿರುವ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ, ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗೆ ರಾಹುಲ್​ರನ್ನ ಆಯ್ಕೆ ಮಾಡಬೇಕಾ..? ಬೇಡವಾ..? ಅಂತ ಚಿಂತನೆ ನಡೆಸುತ್ತಿದ್ದಾರೆ. ಸದ್ಯ ರಾಹುಲ್, ಇಂಡಿಯಾ ‘ಎ’ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯಗಳನ್ನ ಆಡುತ್ತಿದ್ದಾರೆ. ಮೊದಲ ಟೆಸ್ಟ್​ನಲ್ಲಿ 89 ರನ್​ಗಳಿಸಿರೋ ರಾಹುಲ್, ಎರಡನೇ ಟೆಸ್ಟ್​ನಲ್ಲೂ ಅದೇ ಫಾರ್ಮ್ ಮುಂದುವರೆಸಿದ್ರೆ, ಮತ್ತೆ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡೋ ಸಾಧ್ಯತೆ ಹೆಚ್ಚಿದೆ. ​

Follow us on:

YouTube: firstNewsKannada  Instagram: firstnews.tv  Face Book: firstnews.tv  Twitter: firstnews.tv