ಇದೇ ತಿಂಗಳು 24ರಂದು ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ 2 ಟಿ-ಟ್ವೆಂಟಿ ಮತ್ತು 5 ಏಕದಿನ ಪಂದ್ಯಗಳ ಸರಣಿಗೆ, ಕೆ.ಎಲ್.ರಾಹುಲ್ ಆಯ್ಕೆಯಾಗೋದು ಅನುಮಾನವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಟಿ-ಟ್ವೆಂಟಿ ಮತ್ತು ಟೆಸ್ಟ್ ಸರಣಿಯಲ್ಲೂ ಫ್ಲಾಪ್ ಶೋ ನೀಡಿರೋ ರಾಹುಲ್, ಕಳೆದ ಒಂದು ವರ್ಷದಿಂದ ಬ್ಯಾಡ್ ಫಾರ್ಮ್ಗೆ ಸಿಲುಕಿ ರನ್ಗಳಿಸಲು ಪರದಾಡ್ತಿದ್ದಾರೆ. ರಾಹುಲ್ರ ಕಳಪೆ ಫಾರ್ಮ್, ಟೀಮ್ ಇಂಡಿಯಾ ಆಯ್ಕೆಗಾರರ ನೆದ್ದೆಗೆಡಿಸಿದೆ. ಯಸ್..! ಈಗಾಗಲೇ ಆಸ್ಟ್ರೇಲಿಯಾ ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗೆ ತಂಡವನ್ನ ಪ್ರಕಟಿಸಿದೆ. ಆದ್ರೆ ಟೀಮ್ ಇಂಡಿಯಾ ಮಾತ್ರ, ಇನ್ನೂ ತಂಡವನ್ನ ಪ್ರಕಟಿಸಿಲ್ಲ. ಕೆಲವೇ ದಿನಗಳಲ್ಲಿ ಆಸಿಸ್ ಸರಣಿಗೆ ತಂಡವನ್ನ ಆಯ್ಕೆ ಮಾಡಲಿರುವ ಎಂ.ಎಸ್.ಕೆ ಪ್ರಸಾದ್ ನೇತೃತ್ವದ ಆಯ್ಕೆ ಸಮಿತಿ, ಟಿ-ಟ್ವೆಂಟಿ ಮತ್ತು ಏಕದಿನ ಸರಣಿಗೆ ರಾಹುಲ್ರನ್ನ ಆಯ್ಕೆ ಮಾಡಬೇಕಾ..? ಬೇಡವಾ..? ಅಂತ ಚಿಂತನೆ ನಡೆಸುತ್ತಿದ್ದಾರೆ. ಸದ್ಯ ರಾಹುಲ್, ಇಂಡಿಯಾ ‘ಎ’ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ ಅನಧಿಕೃತ ಟೆಸ್ಟ್ ಪಂದ್ಯಗಳನ್ನ ಆಡುತ್ತಿದ್ದಾರೆ. ಮೊದಲ ಟೆಸ್ಟ್ನಲ್ಲಿ 89 ರನ್ಗಳಿಸಿರೋ ರಾಹುಲ್, ಎರಡನೇ ಟೆಸ್ಟ್ನಲ್ಲೂ ಅದೇ ಫಾರ್ಮ್ ಮುಂದುವರೆಸಿದ್ರೆ, ಮತ್ತೆ ಟೀಮ್ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡೋ ಸಾಧ್ಯತೆ ಹೆಚ್ಚಿದೆ.
Follow us on:
YouTube: firstNewsKannada Instagram: firstnews.tv Face Book: firstnews.tv Twitter: firstnews.tv