ಬ್ಯಾಟಿಂಗ್​​ನಲ್ಲಿ ಅಷ್ಟೇ ಅಲ್ಲ, ಗುಣದಲ್ಲೂ ಕೆ.ಎಲ್ ರಾಹುಲ್ ಫಸ್ಟ್​​ಕ್ಲಾಸ್​..!

ಟೀಂ ಇಂಡಿಯಾ ಆಟಗಾರ,ಕನ್ನಡಿಗ ಕೆ.ಎಲ್​ ರಾಹುಲ್ ಐಪಿಎಲ್​ 12ರಲ್ಲಿ ತಮ್ಮ ಕ್ಲಾಸ್ ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ.ಜೊತೆಗೆ ತಮ್ಮ ಮಾನವೀಯ ಗುಣದ ಮೂಲಕವು ಅಭಿಮಾನಿಗಳ ಮನಗೆದ್ದಿದ್ದಾರೆ.ಕಿಂಗ್ಸ್​ ಇಲೆವೆನ್ ಪಂಜಾಬ್ ಪರ ಆಡುತ್ತಿರುವ ರಾಹುಲ್,ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅದ್ಭುತ ಶತಕ ಸಿಡಿಸಿ ಅಬ್ಬರಿಸಿದ್ರು.ಈ ಪಂದ್ಯದ ನಂತರ ರಾಹುಲ್​, ಮುಂಬೈನ ಬಂದ್ರಾದಲ್ಲಿರುವ ಬುದ್ಧಿಮಾಂದ್ಯ ಮಕ್ಕಳ ಆಶ್ರಮಕ್ಕೆ ಭೇಟಿ ನೀಡಿ, ಮಕ್ಕಳ ಜೊತೆ ಸಂತೋಷದಿಂದ ಕೆಲಹೊತ್ತು ಕಾಲ ಕಳೆದಿದ್ದಾರೆ.ಕಳೆದ ವರ್ಷ ಟೀಂ ಇಂಡಿಯಾ ಪರ ಆಡಿದ ಕೆಲ ಸರಣಿಗಳಲ್ಲಿ ಮುಗ್ಗರಿಸಿದ್ರು. ಟೆಸ್ಟ್​, ಏಕದಿನ ಸರಣಿಗಳಲ್ಲಿ ರನ್​ಬರ ಎದುರಿಸಿದ್ರು.ಅಲ್ಲದೇ ಕಾಫಿ ವಿತ್​ ಕರಣ್ ಶೋನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಕೆಲಕಾಲ ಟೀಂ ಇಂಡಿಯಾದಿಂದ ದೂರವಿದ್ರು. ಆದ್ರೆ ಸದ್ಯ ನಡೆಯುತ್ತಿರುವ ಐಪಿಎಲ್​ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿದ್ದಾರೆ.ಈ ಮೂಲಕ ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗುವ ಕನಸು ಕಾಣುತ್ತಿದ್ದಾರೆ.