ದಿನೇಶ್ ಕಾರ್ತಿಕ್ ಬದಲು ರಾಹುಲ್​ಗೆ ಚಾನ್ಸ್..! ಫ್ಯಾನ್ಸ್ ಗರಂ..!

ಆಸ್ಟ್ರೇಲಿಯಾ ವಿರುದ್ಧದ ಟಿ20 ಹಾಗು ಏಕದಿನ ಸರಣಿಗಾಗಿ ಬಿಸಿಸಿಐ ಆಯ್ಕೆ ಸಮಿತಿ ಈಗಾಗಲೇ ಟೀಮ್ ಇಂಡಿಯಾವನ್ನ ಪ್ರಕಟಿಸಿದೆ. ಕನ್ನಡಿಗ ಕೆ.ಎಲ್ ರಾಹುಲ್​ಗೆ ಎರಡು ತಂಡಗಳಲ್ಲು ಚಾನ್ಸ್ ನೀಡಿದೆ. ಆದ್ರೆ ದಿನೇಶ್ ಕಾರ್ತಿಕ್ ಸೇರಿದಂತೆ ಕೆಲ ಆಟಗಾರರಿಗೆ ಏಕದಿನ ತಂಡದಿಂದ ಹೊರಗಿಟ್ಟಿದೆ. ಸದ್ಯ ಇದೇ ಈಗ ಟೀಮ್ ಇಂಡಿಯಾ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಡಿಕೆ ಬದಲು ಔಟ್​ ಆಫ್​ ಫಾರ್ಮ್​ನಲ್ಲಿರೋ ರಾಹುಲ್​ಗೆ, ತಂಡದಲ್ಲಿ ಚಾನ್ಸ್ ನೀಡಿದ್ದೇಕೆ ಎಂದು ಸೋಷಿಯಲ್ ಮೀಡಿಯಾಗಳ ಮೂಲಕ ಬಿಸಿಸಿಐನ ಪ್ರಶ್ನಿಸುತ್ತಿದ್ದಾರೆ. ರಾಹುಲ್​ ಇತ್ತೀಚೆಗೆ ಟೀಮ್ ಇಂಡಿಯಾ ಪರ ಆಡಿದ ಎಲ್ಲಾ ಮಾದರಿಯ ಪಂದ್ಯಗಳಲ್ಲು ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ರು. ಟಾಕ್​ ಶೋವೊಂದರಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ರಾಹುಲ್, ಕೆಲಕಲಾ ಟೀಮ್ ಇಂಡಿಯಾದಿಂದ ಬ್ಯಾನ್ ಆಗಿದ್ರು. ನಿಷೇಧದಿಂದ ಮುಕ್ತಗೊಂಡ ಮೇಲೆ ಭಾರತ ಎ ಪಂಡ ಪರ ಬ್ಯಾಟ್ ಬೀಸಿದ್ದ ರಾಹುಲ್, ಇಂಗ್ಲೆಂಡ್ ಲಯನ್ಸ್​ ವಿರುದ್ಧದ ನಾಲ್ಕು ಪಂದ್ಯಗಳ ಸರಣಿಯಲ್ಲಿ ಅರ್ಧಶತಕ ಬಾರಿಸಿ ಫಾರ್ಮ್​ ಕಂಡುಕೊಂಡಿದ್ರು.