ಕಿಶೋರ್ ಕುಮಾರ್‌ಗೆ ‘ಕನ್ನಡ ಕಾವ್ಯ ಪ್ರತಿಭೆ’ ಪ್ರಶಸ್ತಿ

ಕೊಡಗು : ಬೆಂಗಳೂರಿನ ಕವಿವೃಕ್ಷ ಬಳಗ ಮತ್ತು ಎಚ್.ಎಸ್.ಆರ್.ಎ ಪ್ರಕಾಶನ ವತಿಯಿಂದ ನೀಡಲಾಗುವ ‘ಕನ್ನಡ ಕಾವ್ಯ ಪ್ರತಿಭೆ ಪ್ರಶಸ್ತಿ’ಯನ್ನು ಕೊಡಗಿನ ಬಿ.ಬಿ. ಕಿಶೋರ್ ಕುಮಾರ್ ತಾವೂರು ಪಡೆದುಕೊಂಡಿದ್ದಾರೆ. ಬೆಂಗಳೂರು ಚಾಮರಾಜಪೇಟೆಯ ಕೃಷ್ಣರಾಜ ಪರಿಷಣ್ಮಂದಿರದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಡಿಕೇರಿ ತಾಲೂಕು ಭಾಗಮಂಡಲ ಬಳಿಯ ತಾವೂರು ಗ್ರಾಮದವರಾದ ಕಿಶೋರ್ ಅವರ ‘ ಭಾವದ ಬನದಲ್ಲಿ ’ ಕವನ ಸಂಕಲನಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ವೃತ್ತಿಯಲ್ಲಿ ಶಿಕ್ಷಕರಾಗಿರುವ ಕಿಶೋರ್ ಕುಮಾರ್ ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ನಿಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂರ್ಪಕಿಸಿ:contact@firstnews.tv