ಹತ್ತು ಅಡಿ ಉದ್ದದ ಕಾಳಿಂಗ ಸೆರೆ.!

ಚಿಕ್ಕಮಗಳೂರು: ಮನೆಯ ಗೋದಾಮಿನಲ್ಲಿ ಅಡಗಿ ಕುಳಿತಿದ್ದ ಹತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನ ಉರಗ ತಜ್ಞ ಹರೀಂದ್ರ ಸೆರೆ ಹಿಡಿದದ್ದಾರೆ. ಎನ್.ಆರ್.ಪುರ ತಾಲೂಕಿನ ಮೇಗರಮಕ್ಕಿ ಗ್ರಾಮದ ಮನೆಯೊಂದರಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿತ್ತು.
ಎನ್.ಆರ್.ಪುರ ತಾಲೂಕಿನ ಮೇಗರಮಕ್ಕಿ ಪೃಥ್ವಿ ಮನೆಯಲ್ಲಿ ಬೃಹತ್​ ಕಾಳಿಂಗವನ್ನು ಸೆರೆ ಹಿಡಿಯಲಾಗಿದೆ. ಕಾಳಿಂಗ ಕಂಡು ಭಯ ಭೀತರಾದ ಮನೆಯವರು ಕೂಡಲೇ ಚಿಕ್ಕ ಅಗ್ರಹಾರ ವಲಯ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಉರಗ ತಜ್ಞ ಹರೀಂದ್ರ ಹಾವನ್ನು ಸೆರೆ ಹಿಡಿದು, ಅರಣ್ಯ ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಕಾಡಿಗೆ ಬಿಟ್ಟಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv