‘ಸೈರಾ’ಗೆ ಸಲಾಂ ಅಂದ ‘ಹೆಬ್ಬುಲಿ’..!

ಕಿಚ್ಚ ಸುದೀಪ್​ ಕೈಯಲ್ಲೀಗ, ಸಾಲು ಸಾಲು ಸಿನಿಮಾಗಳಿವೆ. ರೆಸ್ಟೇ ಇಲ್ಲದಂತೆ ಒಂದರ ಹಿಂದೆ ಒಂದರಂತೆ ಶೂಟಿಂಗ್​ನಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಮೊನ್ನೆಯಷ್ಟೇ ಸೆರ್ಬಿಯಾದಿಂದ ‘ಕೋಟಿಗೊಬ್ಬ’ನಾಗಿ ಬಂದ ಕಿಚ್ಚನೀಗ ಸೈರಾ ಟೀಂ ಸೇರಿಕೊಂಡಿದ್ದಾರೆ. ಅಲ್ಲದೆ ಫಸ್ಟ್ ಡೇ ಶೂಟ್​ ಅನುಭವವನ್ನು ಸುದೀಪ್​ ತಮ್ಮ ಟ್ವಿಟ್ಟರ್​ನಲ್ಲಿ ಬರೆದುಕೊಂಡಿದ್ದಾರೆ.

ಫಸ್ಟ್ ಡೇ ಶೂಟ್​ನಲ್ಲಿ ಲೆಜೆಂಡ್​​..!

‘ಸೈರಾ’ ಶೂಟಿಂಗ್​ನ ಮೊದಲ ದಿನವೇ, ಮೆಗಾ ಸ್ಟಾರ್ ಚಿರಂಜೀವಿ ಜೊತೆಗೆ ಸುದೀಪ್​ ಟೈಂ ಪಾಸ್ ಮಾಡಿದ್ದಾರೆ. ಸೈರಾ ಶೂಟಿಂಗ್​ ಆರಂಭಕ್ಕೂ ಮೊದಲೇ ಸುದೀಪ್​ ತುಂಬಾನೇ ಎಕ್ಸೈಟ್ ಆಗಿದ್ದರು. ಯಾಕೆಂದರೆ ಇದು ಸುದೀಪ್​ ನಟನೆಯ ಮೊದಲ ಐತಿಹಾಸಿಕ ಸಿನಿಮಾ. ಅಲ್ಲದೇ ಚಿರಂಜೀವಿ, ವಿಜಯ್​ ಸೇತುಪತಿ ಎದುರಿಗೆ ನಟಿಸ್ತಿರೋದು ಇನ್ನೊಂದು ಹೆಮ್ಮೆಯ ವಿಚಾರ. ಹೀಗಾಗಿ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಬಗ್ಗೆ ಸುದೀಪ್​ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫಸ್ಟ್​ ಡೇ ಶೂಟ್​ ಬಗ್ಗೆ ಸುದೀಪ್​ ಹೀಗೆ ಟ್ವೀಟ್ ಮಾಡಿದ್ದಾರೆ. ‘ಸೈರಾ ಸಿನಿಮಾದ ಫಸ್ಟ್​ ಡೇ ಶೂಟ್​ ಸೂಪರ್ ಆಗಿತ್ತು. ಮೊದಲ ದಿನ ಲೆಜೆಂಡ್​ ನಟನ ಶೂಟಿಂಗ್ ಇತ್ತು. ನಾನು ಆಗಿಂದಾಗೆ ಅವರನ್ನು ಭೇಟಿಯಾಗುತ್ತೇನೆ. ಅವರ ಮಗುವಿನ ಮುಗ್ಧತೆ ತುಂಬಾನೇ ಇಷ್ಟವಾಗುತ್ತೆ’ ಅಂತಾ ಟ್ವೀಟ್​ ಮಾಡಿದ್ದಾರೆ.