ಫಕೀರಪ್ಪನ ಪರ ಕಿಚ್ಚನ ಪ್ರಚಾರ!

ಬಳ್ಳಾರಿ: ಸಣ್ಣ ಫಕ್ಕಿರಪ್ಪ, ಶ್ರೀ ರಾಮುಲು ನನ್ನ ಸಹೋದರರು. ಅವರ ಅಭಿವೃದ್ಧಿಗೆ ತಲೆ ಬಾಗಿ ಅವರ ಬೆಂಬಲಕ್ಕೆ ಬಂದಿರುವೆ ಅಂತಾ ನಾಯಕ ನಟ ಕಿಚ್ಚ ಸುದೀಪ್​ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪರ ಭರ್ಜರಿ ಪ್ರಚಾರ ನಡೆಸ್ತಿರೋ ನಟ ಕಿಚ್ಚ ಸುದೀಪ್​ ಇಂದು ಬಳ್ಳಾರಿ ತಾಲೂಕಿನ ಮೋಕ ಗ್ರಾಮಕ್ಕೆ ತೆರಳಿ ಬಿಜೆಪಿ ಅಭ್ಯರ್ಥಿ ಸಣ್ಣ ಫಕೀರಪ್ಪ ಪರ ಮತಯಾಚನೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು, ನೀವು ನನ್ನ ಮೇಲೆ ಪ್ರೀತಿ ಇಟ್ಟಿದ್ದೀರಿ, ಈ ಪ್ರೀತಿ ನನಗೆ ಕೊನೆಯವರೆಗೂ ಕೊಡಿ. ಫಕ್ಕಿರಪ್ಪಗೆ ಮತ ಹಾಕಿ ಗೆಲ್ಲಿಸಿ ನಿಮ್ಮ ನಂಬಿಕೆಯನ್ನ ಉಳಿಸುತ್ತಾರೆ ಎಂಬ ಭರವಸೆ ನನಗಿದೆ ಅಂತಾ ಕರೆನೀಡಿದ್ರು.

 

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಕ್ಕಾಗಿ ಸಂಪರ್ಕಿಸಿ: contact@firstnews.tv