ರಾಹುಲ್‌ ದ್ರಾವಿಡ್‌ಗೆ ಕಿಚ್ಚ ಸುದೀಪ್ ವಿಶ್‌

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಕರ್ನಾಟಕದ ಹೆಮ್ಮೆ, ರಾಹುಲ್ ದ್ರಾವಿಡ್ ಅವರು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಟ ಕಿಚ್ಚ ಸುದೀಪ್‌ ರಾಹುಲ್‌ ದ್ರಾವಿಡ್‌ಗೆ ಟ್ವಿಟರ್‌ ಮೂಲಕ ಪ್ರೀತಿಯಿಂದ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

“ನಂಬಿಕೆ, ಶಿಸ್ತು, ನಿಯಮ, ಗುರಿ ಹೀಗೆ ಲಿಸ್ಟ್‌ ಬೆಳೆಯುತ್ತಲೇ ಹೋಗುತ್ತದೆ. ಇದೆಲ್ಲವನ್ನೂ ಒಟ್ಟುಗೂಡಿಸಿದ್ರೆ ಈ ಲೆಜೆಂಡ್‌ ಸಿಗ್ತಾರೆ. ನಾನು ಆರಾಧಿಸೋ ಜೆಂಟಲ್‌ಮ್ಯಾನ್ ಹಾಗೂ ಆಟಗಾರ. ತನ್ನ ಕೆಲಸವೇ ಮೂಲಕವೇ ಮಾತಾಡೋ ಮಿತಭಾಷಿ. ಈ ಸಾಧಕನಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಈ ಹೊಸ ವರ್ಷ ಒಳಿತಾಗಲಿ” ಅಂತಾ ಹಾರೈಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ಬರೆದಿರುವ ಕರ್ನಾಟಕದ ರಾಹುಲ್ ದ್ರಾವಿಡ್, ‘ದಿ ವಾಲ್’ ಅಂತಲೇ ಫೇಮಸ್. ಸುದೀರ್ಘ ಕ್ರಿಕೆಟ್‌ ಬದುಕಿನಲ್ಲಿ ಆ ಮಟ್ಟಿನ ವಿಶ್ವಾಸಾರ್ಹತೆ, ನಂಬಿಕೆಯನ್ನ ಗಳಿಸಿರೋ ಕ್ರಿಕೆಟಿಗ. ಹೀಗಾಗೇ ವಿವಿಧ

ಕ್ಷೇತ್ರಗಳ ದಿಗ್ಗಜರುಗಳೆಲ್ಲಾ ರಾಹುಲ್ ಸರಳತೆಗೆ, ಸಾಧನೆಗೆ ಮಾರು ಹೋಗಿದ್ದಾರೆ. ಕ್ರಿಕೆಟ್‌ನಲ್ಲಿ ಅತೀವ ಆಸಕ್ತಿ ಹೊಂದಿರೋ, ಕ್ರಿಕೆಟ್‌ ಆಟವಾಡೋ ಕಿಚ್ಚ ಸುದೀಪ್‌ ಕೂಡ ರಾಹುಲ್ ದ್ರಾವಿಡ್‌ ಅವರ ಅಭಿಮಾನಿ. ಕಳೆದ ವರ್ಷ ಕನ್ನಡ ಚಲನಚಿತ್ರ ಕಪ್ ಟಿ10 ಕ್ರಿಕೆಟ್ ಟೂರ್ನಿ ನಡೀತು. ಇದ್ರಲ್ಲಿ ಕಿಚ್ಚ ಸುದೀಪ್ ಕದಂಬ ಲಯನ್ಸ್ ತಂಡದ ಸಾರಥ್ಯ ವಹಿಸಿದ್ರು.