ಐ ಲವ್​ ಯೂ ಟ್ರೇಲರ್​ ರಿಲೀಸ್​ ಮಾಡ್ತಾರೆ ಕಿಚ್ಚ..!

ರಿಯಲ್ ಸ್ಟಾರ್​ ಉಪ್ಪಿ ಸಿನಿಮಾಗಳು ಅಂದ್ರೆ ಅಭಿಮಾನಿಗಳಲ್ಲಿ ದೊಡ್ಡ ಕ್ರೇಜ್. ಡಿಫ್‌ರೆಂಟ್‌ ಆಗಿರೋ ಟೈಟಲ್, ಕ್ಯಾಚಿಯಾದ ಪಂಚಿಂಗ್ ಡೈಲಾಗ್ ಮೂಲಕವೇ ಅಭಿಮಾನಿಗಳ ಮನತಣಿಸೋ ಉಪ್ಪಿ ಇದೀಗ ಯುವ ಪ್ರೇಮಿಗಳಿಗೆ ‘ಐಲವ್​ಯೂ’ ಪಾಠ ಮಾಡೋಕೆ ರೆಡಿಯಾಗಿದ್ದಾರೆ. ಹೌದು ಆರ್.ಚಂದ್ರು ಹಾಗೂ ಉಪೇಂದ್ರ ಕಾಂಬಿನೇಷನ್​ನ ಬಹುನಿರೀಕ್ಷಿತ ಐಲವ್​ಯೂ ಚಿತ್ರ ಈಗಾಗಲೇ ಮಸ್ತ್ ಆಗಿರೋ ಟ್ತೈಲರ್ ಹಾಗೂ ​ ಹಾಡುಗಳಿಂದ ಮೈ ರೋಮಾಂಚನಗೊಳಿಸಿತ್ತು. ಇದೀಗ ರಿಲೀಸ್​ಗೆ ಕೆಲವೇ ದಿನಗಳು ಬಾಕಿ ಇರುವಂತೆ ಮತ್ತೊಂದು ಥಿಯೇಟ್ರಿಕಲ್​ ಟ್ರೈಲರ್ ರಿಲೀಸ್ ಮಾಡಲು ಸಿದ್ದತೆ ನಡೆಸಿದೆ.

ಉಪ್ಪಿ ಜೊತೆಯಾದ ಕಿಚ್ಚ!
ವಿಶೇಷ ಅಂದ್ರೆ ಐವಲ್​ಯೂ ಚಿತ್ರದ ಎರಡನೇ ಟ್ರೈಲರ್​ನ್ನ ಕಿಚ್ಚ ಸುದೀಪ್ ರಿಲೀಸ್ ಮಾಡಲಿದ್ದಾರೆ. ಪರಸ್ಪರ ಸಿನಿಮಾಗಳಿಗೆ ಸಾಥ್ ನೀಡೋ ಮೂಲಕ ಕಿಚ್ಚ ಹಾಗೂ ಉಪ್ಪಿಯ ಸ್ನೇಹ ಎಂತಹದ್ದು ಅನ್ನೋದು ಗೊತ್ತಾಗಲಿದೆ. ಇನ್ನು ಚಿತ್ರ ಕನ್ನಡ ಸೇರಿದಂತೆ ತೆಲುಗು ಭಾಷೆಯಲ್ಲೂ ಏಕಕಾಲದಲ್ಲಿ ತೆರೆಗೆ ಬರ್ತಾಯಿದ್ದು , ಉಪೇಂದ್ರ ಕಾಲೇಜ್ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಉಪ್ಪಿಗೆ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾರಾಮ್ ಕಮಾಲ್ ಮಾಡಲಿದ್ದಾರೆ. ಹಲವು ವರ್ಷಗಳ ಬಳಿಕ ಉಪ್ಪಿ ಸಿನಿಮಾ ಬರ್ತಾ ಇರೋದು ಅಭಿಮಾನಿಗಳಲ್ಲಿ ಸಂತಸ ತಂದಿದೆ. ಚಿತ್ರ ಮುಂದಿನ ತಿಂಗಳು ತೆರೆಗೆ ಅಪ್ಪಳಿಸಲಿದ್ದು. ಉಪ್ಪಿಯ ಐಲವ್​ಯೂ ಕಥೆ ಹೇಗಿರಲಿದೆ ಅನ್ನೋದು ಕುತೂಹಲ ಮೂಡಿಸಿದೆ.

Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv