ಇಂದು ಚಿತ್ರರಂಗ ಮರೆಯಲಾಗದ ದಿನ: ಕಿಚ್ಚ ಸುದೀಪ್‌

ಇವತ್ತು ನಾಡಿನ ಹೆಮ್ಮೆಯ ಕಣ್ಮಣಿ, ನಟ ಸಾರ್ವಭೌಮ ಡಾ. ರಾಜ್​ಕುಮಾರ್‌ರ 91 ನೇ ವರ್ಷದ ಹುಟ್ಟು ಹಬ್ಬ. ನೂರಾರು ಸಿನಿಮಾಗಳಲ್ಲಿ ಮನೋಜ್ಞವಾಗಿ ಅಭಿನಯಿಸಿ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿರೋ ಮೇರು ನಟ ಡಾ.ರಾಜ್‌. ಅಣ್ಣಾವ್ರ ಹುಟ್ಟಹಬ್ಬದ ಹಿನ್ನೆಲೆಯಲ್ಲಿ ಚಿತ್ರರಂಗದ ಅನೇಕ ತಾರೆಯರು ರಸಿಕರ ರಾಜನನ್ನ ನೆನೆಯುತ್ತಿದ್ದಾರೆ.

ಕಿಚ್ಚನಿಂದ ಶುಭಾಶಯ
ಧ್ರುವತಾರೆಯನ್ನು ನೆನೆದು ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದಾರೆ. ಈ ದಿನ ನಿಜಕ್ಕೂ ಮರೆಯಲಾಗದು. ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿರೋ ದೊಡ್ಡ ಲೆಜೆಂಡ್. ಸಿನಿಮಾ ರಂಗ ಇರುವವವರೆಗೂ ಈ ದಿನ ಮರೆಯಲು ಸಾಧ್ಯವೇ ಇಲ್ಲ. ಅಂತಹ ಮೇರು ನಟನ ಜನ್ಮ ದಿನವಿಂದು. ವ್ಯಕ್ತಿತ್ವ, ಅದ್ಬುತ ಕಾರ್ಯಗಳಿಂದಲೇ ಅಮರತ್ವ ಪಡೆದ ಮಹಾನ್ ಚೇತನ ವರನಟ ಡಾ.ರಾಜ್​ಕುಮಾರ್ ಸರ್. ಈ ದಿನ ನಿಜಕ್ಕೂ ನಾಡಿನ ಕೋಟ್ಯಂತರ ಅಭಿಮಾನಿಗಳು ಹಾಗೂ ಕುಟುಂಬದಲ್ಲಿ ದೊಡ್ಡ ಹಬ್ಬದ ಸಂಭ್ರಮ ತಂದಿದೆ. ಏಪ್ರಿಲ್ 24 ಎಲ್ಲರಿಗೂ ಶುಭವಾಗಲಿ ಅಂತಾ ರಾಜ್ ಸಿನಿ ಜರ್ನಿಯನ್ನು ನೆನೆದು ಟ್ವೀಟ್ ಮಾಡಿದ್ದಾರೆ.