‘ಕ್ರಿಶ್​’ ಹೃತಿಕ್​ ಗೆಟಪ್​​ನಲ್ಲಿ ‘ಕಿಚ್ಚ’ ಶೈನಿಂಗ್​​..!

ಕ್ರಿಶ್​.. ಬಾಲಿವುಡ್​ ಕಂಡ ಸೂಪರ್ ಹಿಟ್ ಸಿನಿಮಾ. ಹೃತಿಕ್ ರೋಷನ್​ ‘ಸೂಪರ್ ಹೀರೊ’ ಆಗಿ ನಟಿಸಿದ ಸಿನಿಮಾ. ಫ್ಯಾಂಟಸಿ ಜಾನರ್​ನಲ್ಲಿ ‘ಕ್ರಿಶ್​’ ಹೊಸದೊಂದು ಅಧ್ಯಾಯ ಆರಂಭಿಸಿತ್ತು. ಇದರಿಂದ ಭಾರತೀಯ ಚಿತ್ರರಂಗದಲ್ಲಿ ಅದೆಷ್ಟೋ ಫ್ಯಾಂಟಸಿ ಕಥೆಗಳು ತೆರೆಗೆ ಬಂದವು. ಕ್ರಿಶ್ ಸೀರಿಸ್​ನಿಂದ ಹೃತಿಕ್​ ಭಾರತದ ಮನೆ ಮಾತಾದರು. ಕ್ರಿಶ್​ ಲುಕ್​, ಹೇರ್​ಸ್ಟೈಲ್​, ಮ್ಯಾನರಿಸಂ.. ಎಲ್ಲವೂ ಸಾಮಾನ್ಯರಿಗೆ ಇಷ್ಟವಾಗಿತ್ತು. ಇದೀಗ ಇಂಥದ್ದೇ ಲುಕ್​ನಲ್ಲಿ ‘ಸೌತ್ ಇಂಡಿಯನ್ ಸ್ಟೈಲಿಸ್ ಸ್ಟಾರ್​’ ಸುದೀಪ್ ಕಾಣಿಸಿಕೊಂಡಿದ್ದಾರೆ.
ಕೋಟಿಗೊಬ್ಬನ ದುಬಾರಿ ಮೇಕಿಂಗ್​..!
ಕೋಟಿಗೊಬ್ಬ.. ಅಂದಾಕ್ಷಣ ನೆನಪಾಗೋದೆ ಡಾ.ವಿಷ್ಣುವರ್ಧನ್. ಕೋಟಿಗೊಬ್ಬ ಕನ್ನಡದ ಸೂಪರ್ ಹಿಟ್ ಆಗಿತ್ತು. ಆನಂತರದಲ್ಲಿ ಕಿಚ್ಚನ ‘ಕೋಟಿಗೊಬ್ಬ-2’ ಮತ್ತೊಂದು ಸಕ್ಸಸ್ ಕಂಡಿತ್ತು. ಇದೀಗ ಮೂರನೇ ಸೀಕ್ವೆಲ್​ನಲ್ಲಿ ಅಬ್ಬರಿಸೋಕೆ ಸುದೀಪ್​ ಸಿದ್ಧವಾಗ್ತಿದ್ದಾರೆ. ಟೀಸರ್​ನಲ್ಲೇ ದುಬಾರಿ ಮೇಕಿಂಗ್​ನಿಂದ ದೊಡ್ಡ ಹೈಪ್​ ಸೃಷ್ಟಿಸಿತ್ತು. ಇದೀಗ ಕಿಚ್ಚನ ಹೊಸದೊಂದು ಲುಕ್​ ಮತ್ತಷ್ಟು ಫೀವರ್ ಹೆಚ್ಚಿಸಿದೆ. ಥೇಟ್​ ‘ಕ್ರಿಶ್​’ ಚಿತ್ರದ ಹೃತಿಕ್​ ಲುಕ್​ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಬ್ಲ್ಯಾಕ್​ ಕಾಸ್ಟ್ಯೂಮ್​, ಲಾಂಗ್ ಹೇರ್​ಸ್ಟೈಲ್​, ಕಣ್ಣಿಗೆ ಬಣ್ಣ ಹಚ್ಚಿಕೊಂಡ ಸುದೀಪ್​ ದರ್ಶನ ಕೊಟ್ಟಿದ್ದಾರೆ. ಅಂದ್ಹಾಗೆ ಚಿತ್ರತಂಡ ವಿದೇಶದಲ್ಲಿ ಹೊಡೆದಾಟ ದೃಶ್ಯಗಳ ಚಿತ್ರೀಕರಣ ನಡೆಸಿದೆ. ಕಿಚ್ಚನ ಈ ಲುಕ್​ ಚಿತ್ರದ ಉದ್ದಕ್ಕೂ ಇರುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಮಿನರ್ವ ಮಿಲ್​ನಲ್ಲಿ ಮೆಟ್ರೋ ಮಾದರಿಯ ಬೃಹತ್​ ಸೆಟ್​ ನಿರ್ಮಿಸಲಾಗಿತ್ತು.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv