ಶಿವಣ್ಣ ದಡ್ಡನಾ? ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಪ್ರಶ್ನೆ..!

ನಗರದಲ್ಲಿ ಸುದೀಪ್ ಮಾತು

ದಾವಣಗೆರೆ: 40 ವರ್ಷದಿಂದ ಇಂಡಸ್ಟ್ರಿಯಲ್ಲಿ ಇರೋ ಶಿವಣ್ಣ ದಡ್ಡನಾ..?? ಎಂದು ಕಿಚ್ಚ ಸುದೀಪ್ ಪ್ರಶ್ನಿಸಿದ್ದಾರೆ. ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ, ಇತ್ತೀಚೆಗೆ ವೀರ ಮದಕರಿ ಚಿತ್ರದಲ್ಲಿ ನಾಯಕ ಸಮುದಾಯದ ಸುದೀಪ್​ ಬಿಟ್ಟು, ಬೇರೆ ಸಮುದಾಯದವರು ನಟಿಸುವುದಕ್ಕೆ ತಮ್ಮ ವಿರೋಧವಿದೆ ಅಂತಾ ಹೇಳಿದ್ದರು. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು.  ಈ ಹಿನ್ನೆಲೆ ನಟ ಸುದೀಪ್ ಹಾಗೂ ಸ್ವಾಮೀಜಿ‌ ಮಾತುಕತೆಗೆ ಮಹತ್ವ ಪಡೆದಿದೆ.

ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಶಿವಣ್ಣನ ಅಭಿಮಾನಿಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಶಿವಣ್ಣ ಪ್ರೇಮ್​ಗೆ ಹೇಳಿ ಸೀನ್​ ಕಟ್ ಮಾಡಿಸಲಿ. ಸಿನಿಮಾದಲ್ಲಿ ಸನ್ನಿವೇಶಕ್ಕೆ ತಕ್ಕಂತೆ ಪಾತ್ರ ಇರುತ್ತೆ. ಸಿನಿಮಾದಲ್ಲಿ ಸುದೀಪ್ ಶಿವಣ್ಣಗೆ ಹೊಡೆಯುವ ಸೀನ್ ಬೇಕಿದ್ದರೆ ತೆಗೆಸಲಿ. ತಾಯಿಗೆ ಪ್ರಾಮಿಸ್ ಮಾಡಿರ್ತಾರೆ, ಹಾಗಾಗಿ ಶಿವಣ್ಣ ಸಿನಿಮಾದಲ್ಲಿ ಕೈ ಎತ್ತೋದಿಲ್ಲ. ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಲಿ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ: contact@firstnews.tv