ಉಪ್ಪಿ ಎದುರು ದೊಡ್ಡ ಆಸೆ ಬಿಚ್ಚಿಟ್ಟ ಕಿಚ್ಚ..!

ರಿಯಲ್​​ ಸ್ಟಾರ್​​ ಉಪ್ಪಿ ಹಾಗೂ ರಚಿತಾ ರಾಮ್ ಅಭಿನಯದ ಉಪ್ಪಿ ಐ ಲವ್ ಯೂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿದ್ದ ಕಿಚ್ಚ ಸುದೀಪ್, ಉಪ್ಪಿ ಅಂಡ್ ಟೀಮ್​​ಗೆ ಶುಭ ಕೋರಿದ್ರು. ಬಳಿಕ ಮಾತನಾದ ಕಿಚ್ಚ ಸುದೀಪ್​​, ಉಪ್ಪಿ ಎದುರು ತಮ್ಮ ದೊಡ್ಡ ಆಸೆಯೊಂದನ್ನು ಬಿಚ್ಚಿಟ್ಟಿದ್ದಾರೆ.

ನಾನು ಇಲ್ಲಿ ಐ ಲವ್ ಯೂ ಚಿತ್ರಕ್ಕೆ ವಿಶ್ ಮಾಡೋಕೆ ಬಂದಿಲ್ಲ..!

ನಾನು ಇಲ್ಲಿ ಐ ಲವ್ ಯೂ ಚಿತ್ರಕ್ಕೆ ವಿಶ್ ಮಾಡೋಕೆ ಬಂದಿಲ್ಲ ಎಂಬ ಅಚ್ಚರಿಯ ಹೇಳಿಕೆ ನೀಡಿದ ಸುದೀಪ್, ಉಪೇಂದ್ರ ಅವರ ಬಳಿ ನನ್ನದೊಂದು ಮನವಿ ಮಾಡಲು ಬಂದಿದ್ದೇನೆ ಎಂದರು. ನಂತರ ಮುಂದುವರೆದ ಕಿಚ್ಚಾ, ನನ್ನ ಆಸೆಯನ್ನ ಉಪೇಂದ್ರ ಈಡೇರಿಸಿದ್ರೆ ಸಾಕು. ಕೆಲವು ನಿರ್ದೇಶಕರು ಮಲಗಬಾರದು. ನಿಮ್ಮಂಥ ಬುದ್ಧಿವಂತ ನಿರ್ದೇಶಕರು ಇಂಡಸ್ಟ್ರಿಗೆ ಬೇಕು. ಅದರಲ್ಲಿ ಎತ್ತಿದ ಕೈ ನೀವು. ಆರ್ ಚಂದ್ರು, ಪ್ರೇಮ್ ಇನ್ನೂ ಹಲವರು ಉಪ್ಪಿ ಸರ್ ಅವರ ಸ್ಫೂರ್ಥಿಯಿಂದ ಕೆಲಸ ಕಲಿತವರು. ಅಂಥ ನಿರ್ದೇಶಕರಾದ ನೀವು, ಡೈರೆಕ್ಷನ್ ಮಾಡಿ ಎಂದು ಕೇಳೋಕೆ ಬಂದಿದ್ದು. ಪ್ಲೀಸ್ ಡೈರೆಕ್ಷನ್ ಮಾಡಿ ಎಂದು ಕಿಚ್ಚ ಸುದೀಪ್​​ ಅವರು ರಿಯಲ್ ಸ್ಟಾರ್ ಬಳಿ ತಮ್ಮದೊಂದು ಮನವಿ ಮಾಡಿಕೊಂಡರು.

 


Follow us on:

YouTube: firstNewsKannada  Instagram: firstnews.tv  Facebook: firstnews.tv  Twitter: firstnews.tv