ಮಹಾರಾಷ್ಟ್ರದಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ಕಾರು ಅಪಘಾತ

ಅಂಜಲಿ ನಿಂಬಾಳ್ಕರ್, ಶಾಸಕಿ

ಬೆಳಗಾವಿ: ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ತುತ್ತಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಶಾಸಕಿ ಸೇರಿ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರ ಬಳಿ ಚಲಿಸುತ್ತಿದ್ದ ವೇಳೆ, ಮುಖಾಮುಖಿ ‌ಢಿಕ್ಕಿ ತಪ್ಪಿಸಲು ಚಾಲಕ ಯತ್ನಿಸಿದ್ದಾನೆ. ಪರಿಣಾಮ ಕಾರು ಮೂರು‌ ಸಲ ಪಲ್ಟಿಯಾಗಿದೆ. ಬಳಿಕ ಸರಣಿ ಕಾರುಗಳ ಅಪಘಾತ ಸಂಭವಿಸಿದೆ. ಸಕಾಲಕ್ಕೆ ಕಾರಿನ ಏರ್ ಬ್ಯಾಗ್ ಓಪನ್‌ ಆಗಿದ್ದು, ಕಾರಿನಲ್ಲಿ ಇದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ನಿಂಬಾಳ್ಕರ್​ ಅವರ ತಲೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ಕಾರಿನಲ್ಲಿದ್ದ ಚಾಲಕ‌ ಮಹಾದೇವ ಹಾಗೂ ಗನ್ ಮ್ಯಾನ್ ಸೈಯದ್ ಕೂಡ ಗಾಯಗೊಂಡಿದ್ದಾರೆ. ಸದ್ಯ, ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.