‘ಉರಿ’ ಸಿನಿಮಾ ಹಿಂದಿಕ್ಕಿದ ‘ಕೆಜಿಎಫ್​’..! ‘ಐಎಂಡಿಬಿ’ಯಲ್ಲಿ ಕೆಜಿಎಫ್​ ನಂ.1..!

‘ಕೆಜಿಎಫ್’​ ಸಿನಿಮಾ ಹಾಫ್​ ಸೆಂಚುರಿ ಬಾರಿಸಿ ಭರ್ಜರಿಯಾಗಿ ಮುನ್ನುಗ್ಗುತ್ತಿದೆ. ಸಿನಿಮಾ ರಿಲೀಸ್ ಆಗಿ 50 ದಿನಗಳೇ ಕಳೆದ್ರೂ ಕೆಜಿಎಫ್​ ಹವಾ ಕಮ್ಮಿಯಾಗಿಲ್ಲ. ಯಾಕೆಂದ್ರೆ ಐಎಂಡಿಬಿ ರೇಟಿಂಗ್​ನಲ್ಲಿ ಕೆಜಿಎಫ್​ ಇವತ್ತಿಗೂ ನಂ.1 ಸ್ಥಾನದಲ್ಲಿದೆ. ಹಿಂದಿ, ತೆಲುಗು, ತಮಿಳು ಭಾಷೆಯ ಸೂಪರ್ ಸ್ಟಾರ್​ ನಟರನ್ನೂ ಹಿಂದಿಕ್ಕಿ ಗೆಲುವಿನ ನಗೆ ಬೀರುತ್ತಿದೆ.
‘ಉರಿ’ ಮುಂದೆ ‘ಕೆಜಿಎಫ್’ ಶೈನಿಂಗ್..!
ಸರ್ಜಿಕಲ್​ ಸ್ಟ್ರೈಕ್ ಕುರಿತು ನಿರ್ಮಾಣವಾಗಿರುವ ‘ಉರಿ’ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್​ ಗಿಟ್ಟಿಸುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲೂ ಕೋಟಿಗಟ್ಟಲೆ ಹಣ ಕೊಳ್ಳೆ ಹೊಡೀತಿದೆ. ಆದರೆ ‘ಕೆಜಿಎಫ್’ ಸ್ಥಾನ ಮಾತ್ರ ಇವತ್ತಿಗೂ ಕಡಿಮೆಯಾಗಿಲ್ಲ. ‘ಕೆಜಿಎಫ್​’ ಅಬ್ಬರದ ಮುಂದೆ ‘ಉರಿ’ ಸೈಲೆಂಟ್ ಆಗಿದೆ. ಶೇ.24 ರಷ್ಟು ಮಂದಿ ‘ಕೆಜಿಎಫ್’ ಕುರಿತು ಉತ್ಸಾಹ ತೋರಿದ್ದಾರೆ. ಉಳಿದಂತೆ ಶೇ.22 ರಷ್ಟು ಮಂದಿ ‘ಉರಿ’ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಕಂಗನಾ ನಟನೆಯ ಮಣಿಕರ್ಣಿಕಾ, ಅಜಿತ್​ ಅಭಿನಯ್ ವಿಶ್ವಾಸಂ ಸಿನಿಮಾಗಳನ್ನೂ ಕೆಜಿಎಫ್ ಬೀಟ್ ಮಾಡಿದೆ. ಈ ಮೂಲಕ ರಾಕಿ ಭಾಯ್​ ಹವಾ ಕಮ್ಮಿಯಾಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದೆ. ಇದರ ಜೊತೆಗೆ ಕೆಜಿಎಫ್​ ಚಾಪ್ಟರ್​ ಬಗ್ಗೆ ಜನರಿಗಿರುವ ಕುತೂಹಲವನ್ನು ಸಾರಿ ಹೇಳ್ತಿದೆ.