ನಿಮಗೂ ಸಿಗಲಿದೆ ‘ಕೆಜಿಎಫ್​’ನಲ್ಲಿ ನಟಿಸುವ ಚಾನ್ಸ್..!

ಕೆಜಿಎಫ್​ ಸಿನಿಮಾ ನೋಡಿದ್ಮೇಲೆ.. ಅದೆಷ್ಟು ಹೊಸಪ್ರತಿಭೆಗಳು ಹೊಟ್ಟೆ ಉರಿದುಕೊಂಡಿದ್ರೋ..? ಇಂಥದ್ದೊಂದು ಸಿನಿಮಾದಲ್ಲಿ ನಾನು ನಟಿಸಿದ್ರೆ ಹೇಗಿರುತ್ತಿತ್ತು..? ಸಣ್ಣ ಪಾತ್ರವಾದ್ರೂ ಸಿಕ್ಕಿದ್ರೆ ಸೂಪರ್ ಆಗಿರುತ್ತಿತ್ತು.. ಅಂತಾ ಕನಸು ಕಂಡಿದ್ರು. ಆದರೆ ಅಂತಹ ದೊಡ್ಡ ಸಿನಿಮಾದಲ್ಲಿ ನಮಗೆಲ್ಲಿ ಚಾನ್ಸ್​ ಸಿಗುತ್ತೆ ಅಂತಾ ತಾವೇ ಸಂತೈಸಿಕೊಳ್ಳುತ್ತಿದ್ದರು. ಆದ್ರೀಗ ನೀವೂ ಕೆಜಿಎಫ್​ನಲ್ಲಿ ನಟಿಸೋಕೆ ಅವಕಾಶ ಹುಡುಕಿ ಬಂದಿದೆ.

ಚಿತ್ರತಂಡದಿಂದ ಆಡಿಷನ್​..!
ಕೆಜಿಎಫ್​ನಲ್ಲಿ ಹತ್ತಾರು ಹೊಸ ಪ್ರತಿಭೆಗಳು ನಟಿಸಿ ಸೈ ಎನಿಸಿಕೊಂಡಿದ್ದರು. ದೊಡ್ಡ ಸಿನಿಮಾವಾದ್ರೂ ಪ್ರತಿ ಪಾತ್ರವೂ ಇಂಪ್ಯಾಕ್ಟ್ ಆಗಿತ್ತು. ಅಲ್ಲದೇ ಸಾವಿರಾರು ಜೂನಿಯರ್​ ಕಲಾವಿದರು ನಟಿಸಿ, ಇಂಥದ್ದೊಂದು ಸಿನಿಮಾದಲ್ಲಿ ನಟಿಸಿದ್ದೇ ಭಾಗ್ಯ ಅಂದುಕೊಂಡಿದ್ದರು. ಇದೀಗ ಜನ ಸಾಮಾನ್ಯರಿಗೂ ಚಿತ್ರತಂಡ ನಟಿಸೋಕೆ ಅವಕಾಶ ಕೊಟ್ಟಿದೆ. ಅರ್ಥಾತ್​ ಕೆಜಿಎಫ್​ ಟೀಂ ಚಾಪ್ಟರ್​ 2 ಗಾಗಿ ಆಡಿಷನ್​ ಆಯೋಜಿಸಿದೆ. 8 ರಿಂದ 16 ವರ್ಷ ಹುಡುಗ. ಹಾಗೂ 25ರ ಮೇಲ್ಪಟ್ಟ ಕಲಾವಿದರಿಗಾಗಿ ಎದುರು ನೋಡುತ್ತಿದೆ. ಏಪ್ರಿಲ್​ 26ರಂದು ಆಡಿಷನ್​ ನಡೆಯಲಿದ್ದು, ಆಡಿಷನ್​ಗೆ ಹೋಗುವಂತವರು ಸ್ವತಃ ಒಂದು ನಿಮಿಷದ ಡೈಲಾಗ್​ ಸಿದ್ಧಪಡಿಸಿಕೊಳ್ಳಬೇಕಾಗಿದೆ.


Follow us on:

YouTube: firstNewsKannada  Instagram: firstnews.tv  FaceBook: firstnews.tv  Twitter: firstnews.tv