‘ಕೆಜಿಎಫ್​’ ಡೈಲಾಗ್ ರೈಟರ್​, ಈಗ ದರ್ಶನ್​ ಅಡ್ಡದಲ್ಲಿ..!

‘ಗ್ಯಾಂಗ್​ ಕಟ್ಕೊಂಡು ಬರೋನು ಗ್ಯಾಂಗ್​ಸ್ಟಾರ್​.. ಒಬ್ನೇ ಬರೋನು ಮಾನ್​ಸ್ಟರ್​…’ ಇದೊಂದು ಡೈಲಾಗ್​ ಸಾಕು ‘ಕೆಜಿಎಫ್​’ ಸಿನಿಮಾದ ಡೈಲಾಗ್​ ಕ್ವಾಲಿಟಿ ಏನು ಅಂತಾ ಹೇಳೋಕೆ. ‘ಕೆಜಿಎಫ್’ ಇಷ್ಟೊಂದು ಜನಪ್ರಿಯವಾಗೋಕೆ ಮೇಕಿಂಗ್​ ಎಷ್ಟು ಮುಖ್ಯವೋ, ಡೈಲಾಗ್ಸ್​ ಕೂಡ ಬಹುಮುಖ್ಯವಾಗಿತ್ತು. ಸಂಭಾಷನೆಕಾರ ಚಂದ್ರಮೌಳಿ, ಮೊದಲ ಸಿನಿಮಾದಲ್ಲೇ ಸಕ್ಸಸ್ ಕಂಡಿದ್ದರು. ಇಲ್ಲಿವರೆಗೂ ಇದ್ದಂತಹ ಸಂಭಾಷಣೆ ಶೈಲಿಯನ್ನು ಮೀರಿ ಹೊಸದೊಂದು ಟ್ರೆಂಡ್​ ಸೃಷ್ಟಿಸಿದ್ದರು. ಅಂದ್ಹಾಗೆ ‘ಕೆಜಿಎಫ್​ ಡೈಲಾಗ್ಸ್​’ ಹಿಂದಿನ ಶಕ್ತಿಯಾಗಿದ್ದ ಚಂದ್ರಮೌಳಿ, ಈಗ ಚಾಲೆಂಜಿಂಗ್ ಸ್ಟಾರ್ ಸಿನಿಮಾಗೆ ಕೈ ಜೋಡಿಸಿದ್ದಾರೆ.
‘ರಾಬರ್ಟ್​’ನಲ್ಲಿ ಚಂದ್ರು ಕೈ ಚಳಕ..!
ರಾಬರ್ಟ್​.. ‘ಚಾಲೆಂಜಿಂಗ್ ಸ್ಟಾರ್​’ ದರ್ಶನ್​ ನಟಿಸ್ತಿರೋ ಮತ್ತೊಂದು ಮಾಸ್​ ಎಂಟರ್ಟೈನರ್ ಸಿನಿಮಾ. ದಚ್ಚು ಸಿನಿಮಾವೆಂದರೆ ಸಂಭಾಷಣೆಗೆ ಮತ್ತೊಂದು ವೇಟೇಜ್​ ಇರುತ್ತೆ. ಸಖತ್​ ಪವರ್​ಫುಲ್ ಸಂಭಾಷಣೆ ಇರುತ್ತೆ. ಹೀಗಾಗಿ ನಿರ್ದೇಶಕ ತರುಣ್​ ಸುಧೀರ್​, ಚಂದ್ರಮೌಳಿಯನ್ನು ಕರೆ ತಂದಿದ್ದಾರೆ. ‘ರಾಬರ್ಟ್​’ ಸಿನಿಮಾಗೆ ಆಫರ್ ಸಿಕ್ಕಿರೋದು ಸ್ವತಃ ಚಂದ್ರುಗೂ ಖುಷಿ ತಂದಿದೆ. ಈಗಾಗಲೇ ಸಿನಿಮಾದ ಸೆಕೆಂಡ್ ಹಾಫ್​ ಡೈಲಾಗ್ಸ್ ಕಂಪ್ಲೀಟ್ ಆಗಿದೆ. ಉಳಿದಂತೆ ಫಸ್ಟ್ ಹಾಫ್​ ಸಂಭಾಷಣೆಯನ್ನು ಇಷ್ಟರಲ್ಲೇ ಕೈಗೆತ್ತಿಕೊಳ್ಳಲಿದ್ದಾರೆ. ಇದೂವರೆಗೆ ದರ್ಶನ್​ ಸಿನಿಮಾಗಳಲ್ಲಿದ್ದ ಸಂಭಾಷಣೆಗಿಂತ, ವಿಭಿನ್ನ ಶೈಲಿಯ ಸಂಭಾಷಣೆಯನ್ನು ಟ್ರೈ ಮಾಡೋಕೆ ಚಂದ್ರು ಮುಂದಾಗಿದ್ದಾರೆ. ಅಲ್ಲದೇ ‘ರಾಬರ್ಟ್​’ ಸಿನಿಮಾದ ಉದ್ದಕ್ಕೂ ಮಾಸ್​ ಡೈಲಾಗ್ಸ್​ ಅಬ್ಬರ ಇರಲಿದೆ. ‘ರಾಬರ್ಟ್​’ ಸಿನಿಮಾದ ಶೂಟಿಂಗ್​ ಮಾರ್ಚ್​ನಲ್ಲಿ ಶುರುವಾಗಲಿದ್ದು, ಸಿನಿಮಾದ ಸಂಭಾಷಣೆ ಕುರಿತಾಗಿ ದೊಡ್ಡ ನಿರೀಕ್ಷೆ ಹುಟ್ಟಿಕೊಂಡಿದೆ.