ಶೂಟಿಂಗ್​ ಶುರು ಆಗೋಕೂ ಮೊದಲೇ ‘ಕೆಜಿಎಫ್​’ ಫೀವರ್​..!

ಕೆಜಿಎಫ್​.. ಕನ್ನಡ ಚಿತ್ರರಂಗದ ಕ್ವಾಲಿಟಿಯನ್ನು ವಿಶ್ವಮಟ್ಟದಲ್ಲಿ ತೋರಿಸಿದ ಸಿನಿಮಾ. ಬಾಕ್ಸ್ ಆಫೀಸ್​ನಲ್ಲಿ ಮೂರಂಕಿ ದಾಟಿದ ಮೊದಲ ಕನ್ನಡ ಸಿನಿಮಾ. ಪ್ರೇಕ್ಷಕರಿಂದಲೂ ಉತ್ತಮವಾದ ವಿಮರ್ಶೆ ಗಿಟ್ಟಿಸಿ, ‘ಕೆಜಿಎಫ್​ ಚಾಪ್ಟರ್​-1’ ಅಂಥದ್ದೊಂದು ಇತಿಹಾಸವನ್ನು ಸೃಷ್ಟಿಸಿತ್ತು. ಇದೀಗ ‘ಚಾಪ್ಟರ್​-2’ ಆರಂಭವಾಗುತ್ತಿದ್ದು, ಚಿತ್ರೀಕರಣಕ್ಕೂ ಮೊದಲೇ ಫೀವರ್ ಹೆಚ್ಚಿಸಿದೆ.

ಬುಕ್​ ಮೈ ಶೋನಲ್ಲಿ ‘ರಾಕಿಭಾಯ್’..!
ಕೆಜಿಎಫ್​ ನಿರೀಕ್ಷೆಗೂ ಮೀರಿದ ಯಶಸ್ಸು ಗಳಿಸಿ, ದೇಶಾದ್ಯಂತ ಹವಾ ಎಬ್ಬಿಸಿತ್ತು. ಮೇಕಿಂಗ್​ ಕ್ವಾಲಿಟಿ, ರಾಕಿಭಾಯ್​ ಖದರ್​, ಮ್ಯೂಸಿಕ್​.. ಎಲ್ಲವೂ ಹಾಲಿವುಡ್​ ಲೆವೆಲ್ಲಿಗೆ ಹೋಲಿಕೆ ಮಾಡಲಾಗಿತ್ತು. ಇದೀಗ ಚಾಪ್ಟರ್​-2 ಹೆಣೆಯೋದ್ರಲ್ಲಿ ಚಿತ್ರತಂಡ ಯೋಜನೆ ನಡೆಸಿದೆ. ತಿಂಗಳ ಹಿಂದೆಯಷ್ಟೇ ‘ಚಾಪ್ಟರ್​-2’ ಮುಹೂರ್ತ ಸಿಂಪಲ್ಲಾಗಿ ನಡೆದಿತ್ತು. ಮುಂದಿನ ತಿಂಗಳಲ್ಲಿ ಚಿತ್ರೀಕರಣ ಆರಂಭವಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಈಗಾಗಲೇ ‘ಚಾಪ್ಟರ್-2’ ಹವಾ ಸೃಷ್ಟಿಸಿದೆ. ಅರ್ಥಾತ್ ಬುಕ್​ ಮೈ ಶೋನಲ್ಲಿ ಜನರು ಅದಾಗಲೇ ಸಿನಿಮಾ ಕುರಿತು ಕುತೂಹಲ ವ್ಯಕ್ತಪಡಿಸಿದ್ದಾರೆ. ಬುಕ್​ ಮೈ ಶೋನಲ್ಲಿ ‘ಕೆಜಿಎಫ್​ ಚಾಪ್ಟರ್​-2’ ಪೇಜ್ ತೆರೆಯಲಾಗಿದ್ದು, 10 ಸಾವಿರ ಮಂದಿ ಇಂಟರೆಸ್ಟೆಡ್​ ಅಂತಾ ಲೈಕ್​ ಕೊಟ್ಟಿದ್ದಾರೆ. ಒಟ್ಟಾರೆ ಚಿತ್ರೀಕರಣಕ್ಕೂ ಮೊದಲೇ ಕೆಜಿಎಫ್​ ಚಾಪ್ಟರ್​-2 ದೊಡ್ಡದೊಂದು ಅಲೆ ಎಬ್ಬಿಸಿದೆ.