ಮತ್ತೆ ಮುಳುಗಿತು ಕೆರೆಮನೆ ಕಿರುಸೇತುವೆ

ಚಿಕ್ಕಮಗಳೂರು:  ಜಿಲ್ಲೆಯಲ್ಲಿ ಮಳೆಯ ಆರ್ಭಟ ಮತ್ತೆ ಮುಂದುವರಿದಿದೆ. ಜಿಲ್ಲೆಯ ಶೃಂಗೇರಿ, ಬಾಳೆ ಹೊನ್ನೂರು ಸುತ್ತ ಮುತ್ತ ಮಳೆಯಾಗುತ್ತಿದ್ದು ರಸ್ತೆಗಳು ಜಲಾವೃತಗೊಂಡಿವೆ. ಶೃಂಗೇರಿ ಹಾಗೂ ಕೆರೆಮನೆ ನಡುವೆ ಸಂಪರ್ಕ ಕಲ್ಪಿಸುವ ಕಿರು ಸೇತುವೆ ಮತ್ತೆ ಜಲಾವೃತಗೊಂಡಿದ್ದು,  ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದೇ ವೇಳೆ ತುಂಗಾ ನದಿಯಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಕೆರೆಮನೆ ಕಿರುಸೇತುವೆ ಮೇಲೆ ನೀರು ಹರಿಯುತ್ತಿದ್ದು,  ಕಳೆದ ಒಂದು ತಿಂಗಳಿನಿಂದ 2 ನೇ ಬಾರಿಗೆ ಕಿರು ಸೇತುವೆ ಜಲಾವೃತವಾಗಿದ್ದು, ತುಂಗಾ ತೀರದ ಜನರು ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv