ಕೆಂಪೇಗೌಡರ ಜಯಂತಿ: ಸ್ಟೆಪ್​ ಹಾಕಿ ಕುಣಿದು ದಣಿದ ಶಾಸಕ

ತುಮಕೂರು: ಕೆಂಪೇಗೌಡ ಜಯಂತಿಯ ಪ್ರಯುಕ್ತ ನಿನ್ನೆ ತುಮಕೂರಿನಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನಡೆದ ಕಲಾತಂಡಗಳ ಮೆರವಣಿಗೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ‌‌ ಡಿ.ಸಿ.ಗೌರಿಶಂಕರ್ ಸಖತ್ ಸ್ಟೆಪ್ಸ್ ಹಾಕಿ, ಕುಣಿದು ಕುಪ್ಪಳಿಸಿದ್ದಾರೆ. ತಮ್ಮ ಬೆಂಬಲಿಗರು ಹಾಗೂ ನಾಯಕರ ಜೊತೆ ಅವರು ತಮಟೆ ಸದ್ದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಇಲ್ಲಿನ ಟೌನ್‌ಹಾಲ್ ವೃತ್ತದಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ನಡೆದ ಕಲಾತಂಡಗಳ ಮೆರವಣಿಗೆ ವೇಳೆ ಜೆಡಿಎಸ್​ ಶಾಸಕ ಗೌರಿಶಂಕರ್ ಕುಣಿದು ಕುಪ್ಪಳಿಸಿದ್ದಾರೆ.