ಅಸಿಡಿಟಿ ಸಮಸ್ಯೆಗೆ ಹೇಳಿ ಗುಡ್ ಬೈ..!

ಇತ್ತೀಚಿನ ದಿನಗಳಲ್ಲಿ ಅಸಿಡಿಟಿ ಸಾಮಾನ್ಯ ಸಮಸ್ಯೆಯಾಗಿದ್ದು, ಬಹಳಷ್ಟು ಜನರು ಇದರಿಂದ ಬಳಲುತ್ತಿದ್ದಾರೆ. ಹೊಟ್ಟೆಯಲ್ಲಿನ ಗ್ರಂಥಿಗಳಲ್ಲಿ ಅಧಿಕ ಆಮ್ಲ ಉತ್ಪತ್ತಿಯಾದಾಗ ಅಸಿಡಿಟಿ ಉಂಟಾಗುತ್ತದೆ. ಜಠರಾಮ್ಲದ ಸ್ರಾವವು ಮಾಮೂಲಿಗಿಂತಲೂ ಹೆಚ್ಚಾಗಿದ್ದಾಗ ಸಾಮಾನ್ಯವಾಗಿ ಎದೆ ಉರಿಯುತ್ತದೆ. ಇದನ್ನೇ ನಾವು ಅಸಿಡಿಟಿ ಎಂದು ಕರೆಯುತ್ತೇವೆ. ಆಹಾರ ಸೇವನೆಯ ಅಭ್ಯಾಸ ಸರಿಯಾಗಿಲ್ಲದ ವ್ಯಕ್ತಿಯಲ್ಲಿ ಈ ಸಮಸ್ಯೆ ತೀವ್ರ ರೂಪದಲ್ಲಿ ಇರಬಹುದು. ನಾವು ಸೇವಿಸುವ ಕೆಲವು ಆಹಾರಗಳು ನಿಮ್ಮ ದೇಹವನ್ನು ಬಿಸಿಮಾಡಲು ಕಾರಣವಾಗುತ್ತವೆ. ಇದರಿಂದಾಗಿ ಆಮ್ಲತೆ ಮತ್ತು ಉಬ್ಬುವುದು ಕಂಡುಬರುತ್ತದೆ. ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇದ್ದರೂ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳಬಹುದು. ಚಹಾ ಅಥವಾ ಕಾಫಿಯ ಅತಿಯಾದ ಸೇವನೆ ಮತ್ತು ಹೆಚ್ಚು ಮಸಾಲೆಯುಕ್ತ ಆಹಾರವನ್ನು ತಿನ್ನುವುದರಿಂದ ಅಸಿಡಿಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ನಿಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದರೂ ಕೂಡಾ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

 ಅಸಿಡಿಟಿ ಸಮಸ್ಯೆಗೆ ಸಿಂಪಲ್​ ಪರಿಹಾರ ಇಲ್ಲಿದೆ

1. ಮಜ್ಜಿಗೆ: ಕೆಲವೊಮ್ಮೆ ಹೆಚ್ಚು ಮಸಾಲೆಯುಕ್ತ ಆಹಾರವನ್ನ ಸೇವಿಸದ್ರೆ ಅಸಿಡಿಟಿ ಸಮಸ್ಯೆ ಕಾಡಬಹುದು. ಈ ವೇಳೆ ಮಜ್ಜಿಗೆಯನ್ನ ಸೇವಿಸಿದ್ರೆ ನಮಗೆ ಖಂಡಿತ ರಿಲೀಫ್​ ಸಿಗುತ್ತೆ. ಯಾಕಂದ್ರೆ ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್​ ಆ್ಯಸಿಡ್​ ಹೊಟ್ಟೆಯಲ್ಲಿ ಆಮ್ಲ ಉಂಟಾಗುವುದನ್ನ ತಡೆಯುತ್ತದೆ. ​

2. ಅಜ್ವಾನ್​: ಅಜ್ವಾನ್​ನಲ್ಲಿ ಆ್ಯಂಟಿ ಆ್ಯಸಿಡ್​ ಗುಣಲಕ್ಷಣಗಳಿವೆ. ಇದು ಅಸಿಡಿಟಿ ಉಂಟಾಗದಂತೆ ಕಾಪಾಡುತ್ತದೆ. ಸೋಂಪು ಮತ್ತು ಅಜ್ವಾನ್ ಮಿಶ್ರಣವನ್ನು ಊಟದ ನಂತರ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಯಿಂದ ಮುಕ್ತಿ ಹೊಂದಬಹುದು. ಇನ್ನು ಅಜ್ವಾನ್​ ಅಸಿಡಿಟಿ ನಿವಾರಿಸಲು ಮಾತ್ರವಲ್ಲ, ಮತ್ತೆ ಅಸಿಡಿಟಿ ಸಮಸ್ಯೆ ಉಂಟಾಗದಂತೆ ಕಾಪಾಡುತ್ತದೆ.

3. ಶುಂಠಿ: ಮ್ಯಾಕ್ರೊಬಯೋಟಿಕ್ ನ್ಯೂಟ್ರೀಶನಲಿಸ್ಟ್​ ಶಿಲ್ಪಾ ಅರೋರಾ ಪ್ರಕಾರ, “ಶುಂಠಿ ಹೊಟ್ಟೆಯಲ್ಲಿ ಉಂಟಾಗುವ ಆಮ್ಲವನ್ನು ಹೀರಿಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಲ್ಲದೇ ಶುಂಠಿ ಜೀರ್ಣಕ್ರಿಯೆ ಉತ್ತಮವಾಗಿರುವಂತೆ ಮಾಡುತ್ತದೆ. ಶುಂಠಿ ಟೀ, ಅಥವಾ ನೀರಿನಲ್ಲಿ ಶುಂಠಿಯನ್ನ ಚೆನ್ನಾಗಿ ಕುದಿಸಿ, ದಿನಕ್ಕೆ ಎರಡು-ಮೂರು ಬಾರಿ ಸೇವಿಸುವುದರಿಂದ ಅಸಿಡಿಟಿ ಸಮಸ್ಯೆಗೆ ಶೀಘ್ರ ಪರಿಹಾರ ಪಡೆಯಬಹುದು.