ಕೆಡಿಪಿ ಸಭೆಯಲ್ಲಿ ಅಧಿಕಾರಿಯ ಲವ್ವಿಡವ್ವಿ ಆಟ..!

ಚಿತ್ರದುರ್ಗ: ಕೆಡಿಪಿ ಸಭೆ ಕಾಟಾಚಾರಕ್ಕೆ ನಡೆಯುತ್ತೆ ಅನ್ನೋದು ಮೊದಲಿನಿಂದಲೂ ತಿಳಿದಿರೋ ವಿಚಾರ. ಸಭೆಗೆ ಬರೋ ಅಧಿಕಾರಿಗಳು ಮೊಬೈಲ್‌ನಲ್ಲಿಯೇ ಮುಳುಗಿರ್ತಾರೆ ಅನ್ನೋದು ಹೊಸದೇನಲ್ಲ ಬಿಡಿ. ಆದ್ರೆ, ಇವತ್ತು ಚಿತ್ರದುರ್ಗದ ಜಿಲ್ಲಾ ಪಂಚಾಯತ್‌ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಕ್ಷರ ದಾಸೋಹ ಅಧಿಕಾರಿಯ ರಸಿಕತೆ ಬಯಲಾಗಿದೆ.
ಅಕ್ಷರ ದಾಸೋಹ ಅಧಿಕಾರಿ ದಾರುಕೇಶ್‌ ಇಬ್ಬರು ಮಹಿಳೆಯರೊಂದಿಗೆ ಚಾಟ್ ಮಾಡ್ತಿದ್ದದ್ದು ಕ್ಯಾಮರಾದಲ್ಲಿ ಸೆರೆಯಾಗಿದೆ. ಆಶ್ಚರ್ಯ ಅಂದ್ರೆ, ಇಬ್ಬರು ಮಹಿಳೆಯರಲ್ಲಿ , ಓರ್ವ ಮಹಿಳೆಗೆ ಐ ಲವ್​ ಯೂ ಎಂಬ ಸಂದೇಶ ಕಳಿಸಿದ್ದಾನೆ. ಅಲ್ಲದೇ, ಆ ಮಹಿಳೆಗೆ ನಿಮ್ಮ ಮನೆ ಡೋರ್ ಯಾವಾಗ್ಲೂ ಕ್ಲೋಸ್ ಆಗಿಯೇ ಇರುತ್ತದೆ. ಫೈನಲಿ ಕೇಳ್ತಿನಿ… ಮನೆ ಹತ್ರ ಬರ್ತಿನಿ ಎಂದು ಮೆಸೇಜ್ ಮಾಡಿದ್ದಾರೆ.
ಇವರಷ್ಟೇ ಅಲ್ಲ, ಬಹುತೇಕ ಅಧಿಕಾರಿಗಳು ಫೇಸ್​ಬುಕ್, ವಾಟ್ಸಾಫ್‌​ನಲ್ಲಿ ಬ್ಯುಸಿಯಾಗಿದ್ರು. ಇನ್ನು ಕೆಲ ಅಧಿಕಾರಿಗಳು ನಿದ್ರೆಗೆ ಜಾರಿದ್ದರು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಗಹನವಾದ ಚರ್ಚೆ ನಡೆಸಬೇಕಾದ ಅಧಿಕಾರಿಗಳೇ ಈ ರೀತಿ ಮಾಡಿದರೆ, ಸಮಸ್ಯೆಗಳಿಗೆ ಪರಿಹಾರ ಹೇಗೆ ಸಾಧ್ಯವಾದೀತು ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ನಿಮ್ಮ ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳಿಗೆ ಸಂಪರ್ಕಿಸಿ:contact@firstnews.tv