ಕೆಡಿಪಿ ಸಭೆಯಲ್ಲಿ ನಿದ್ದೆ, ಮೊಬೈಲ್​​ನಲ್ಲಿ‌ ಅಧಿಕಾರಿಗಳು ಫುಲ್​ ಬಿಜಿ..!

ದಾವಣಗೆರೆ: ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ನಿದ್ದೆಗೆ ಜಾರಿದರೆ ಮತ್ತೆ ಕೆಲ ಅಧಿಕಾರಿಗಳು ಮೊಬೈಲ್​​ನಲ್ಲಿ‌ ಬಿಜಿಯಾಗಿದ್ದಾರೆ. ದಾವಣಗೆರೆ ಜಿಲ್ಲಾ ಪಂಚಾಯತ್​​​ ಆವರಣದಲ್ಲಿ 2018-19 ನೇ ಸಾಲಿನ ಕರ್ನಾಟಕ ಅಭಿವೃದ್ದಿ ಕಾರ್ಯಕ್ರಮದ ಮೂರನೇ ತ್ರೈಮಾಸಿಕ ಸಭೆ ನಡೆಯುತ್ತಿದೆ. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್. ಶ್ರೀನಿವಾಸ್ ಸಭೆ ಮಾಡುತ್ತಿದ್ದರೆ, ಅಧಿಕಾರಿಗಳು ತಮಗೂ ಸಭೆಗೂ ಸಂಬಂಧ ಇಲ್ಲ ಎಂದು ನಿದ್ದೆ ಮಾಡುವುದರ ಜೊತೆಗೆ ಕೆಲವರು ಮೊಬೈಲ್​​​ನಲ್ಲಿ ಬಿಜಿಯಾಗಿದ್ದಾರೆ. ಸಭೆಯಲ್ಲಿ ಬರ ಕುರಿತು ಚರ್ಚೆ ನಡೆಯುತ್ತಿದ್ದರೆ ಅಧಿಕಾರಿಗಳು ಕ್ಯಾರೆ ಎನ್ನದೆ ತಮ್ಮ ಪಾಡಿಗೆ ತಾವು ಬಿಜಿಯಾಗಿದ್ದಾರೆ.